Publish Date: Mon, 21 Aug 2023 (18:20 IST)
Updated Date: Mon, 21 Aug 2023 (18:23 IST)
ತಮ್ಮ ಕ್ಷೇತ್ರಕ್ಕೆ 7.64 ಕೋಟಿ ಅನುದಾನ ಬಿಡುಗಡೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ S.T.ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಕ್ಷೇತ್ರದಲ್ಲಿ ಸಮಸ್ಯೆ ಆಗಿತ್ತು. ಒಂದೇ ಒಂದು ಬೋರ್ವೆಲ್ ಕೊರೆಸಲು ಆಗಿರಲಿಲ್ಲ. ಧರಣಿ ಕೂರೋದಾಗಿ ಹೇಳಿದ್ದೆ. ಈ ಸಂಬಂಧ ಬಿಬಿಎಂಪಿ ಕಮೀಷನರ್ ಹಾಗೂ ರಾಕೇಶ್ ಸಿಂಗ್ ಅವರ ಜೊತೆಯೂ ಮಾತನಾಡಿದ್ದೆ. ಟ್ಯಾಂಕರ್ಗಳಲ್ಲಿ ನೀರು ಕೊಡೋದಕ್ಕೂ ಸಮಸ್ಯೆ ಆಗಿತ್ತು. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಳಿಯೂ ಕೆಂಪೇಗೌಡ ಬಡಾವಣೆ ವೀಕ್ಷಣೆಗೆ ಬಂದಿದ್ದ ಸಮಯದಲ್ಲಿ ಮಾತನಾಡಿ, ವಾಸ್ತವ ಸ್ಥಿತಿ ಬಗ್ಗೆ ವಿವರಿಸಿದ್ದೆ. ಡೆವಲಪ್ಮೆಂಟ್ ಹಣ ಸ್ಟಾಪ್ ಮಾಡಿ, ಕುಡಿಯುವ ನೀರು ಸ್ಟಾಪ್ ಮಾಡಬೇಡಿ ಅಂತ ಹೇಳಿದ್ದೆ. ಆಗ ಅಧಿಕಾರಿಗಳಿಗೆ ಹಣ ಬಿಡುಗಡೆ ಮಾಡುವಂತೆ ಹೇಳಿದ್ರು, ಆದ್ದರಿಂದ ಹಣ ಬಿಡುಗಡೆ ಆಗಿದೆ ಎಂದರು.