Publish Date: Thursday, 02 March 2023 (18:06 IST)
Updated Date: Thursday, 02 March 2023 (18:08 IST)
ಕರ್ನಾಟಕದಲ್ಲಿ ದಿನೇ ದಿನೇ ಬಿಸಿಲಿನ ಕಾವು ಹೆಚ್ಚಾಗುತ್ತಿದೆ. ಇತ್ತ ಬೇಸಿಗೆಕಾಲದ ಆರಂಭವನ್ನು ಅಧಿಕೃತಪಡಿಸಿರುವ ಭಾರತೀಯ ಹವಾಮಾನ ಇಲಾಖೆ ಯು ಅತ್ಯಧಿಕ ಉಷ್ಣಾಂಶದ ದಾಖಲಾಗುವ ಬಗ್ಗೆ ಮುನ್ಸೂಚನೆಯನ್ನು ನೀಡಿದೆ. ಮಾರ್ಚ್, ಏಪ್ರೀಲ್ ಹಾಗೂ ಮೇ ಈ ಮೂರು ತಿಂಗಳಲ್ಲಿ ಸಾಮಾನ್ಯವಾಗಿ ಬೇಸಿಗೆ ಕಾಲವಾಗಿದೆ. ಆದರೆ ಈ ಭಾರಿ ಅತ್ಯಧಿಕ ಬಿಸಿಲು ಬೀಳಲಿದೆ. ಕಳೆದ ಫೆಬ್ರವರಿಯಲ್ಲಿ ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಬಿಸಿಲು ಕ್ರಮೇಣ ಏರತೊಡಗಿತು. ಆದರೆ ದಕ್ಷಿಣ ಒಳನಾಡಿನಲ್ಲಿ ಅಷ್ಟಾಗಿ ಹೆಚ್ಚಾಗಿರಲಿಲ್ಲ. ಆದರೆ ಮುಂದಿನ 90ದಿನ ಕರ್ನಾಟಕ ಅತ್ಯಧಿಕ ಬಿಸಲಿಗೆ ಸಾಕ್ಷಿಯಾಗಲಿದೆ ಎಂದು ಕರ್ನಾಟಕ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ವಿಜ್ಞಾನ ಮತ್ತು ಹವಾಮಾನ ತಜ್ಞ ಡಾ.ಪ್ರಸಾದ್ ತಿಳಿಸಿದ್ದಾರೆ