Publish Date: Thu, 02 Mar 2023 (14:44 IST)
Updated Date: Thu, 02 Mar 2023 (16:29 IST)
ಬೀದರ್ : ನಾಳೆ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ ನೀಡಲು ಕಲ್ಯಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಸ ಕೈಗೊಂಡಿದ್ದು, ಚುನಾವಣಾ ಚಾಣಕ್ಯನಿಗೆ ನೀಡಲು ವಿಶೇಷವಾದ ಬೆಳ್ಳಿಯ ಗದೆ ಹಾಗೂ ಕಿರೀಟ ಸಿದ್ಧವಾಗಿದೆ.
ಶುಕ್ರವಾರ ಬೀದರ್ಗೆ ಆಗಮಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ 5 ಕೆಜಿಯ ಆಕರ್ಷಕ ಬೆಳ್ಳಿಯ ಗದೆ ಮತ್ತ ಬೆಳ್ಳಿಯ ಕಿರೀಟಾವನ್ನು ಶಾಗೆ ನೀಡಲು ಬಸವ ಕಲ್ಯಾಣ ಶಾಸಕ ಶರಣು ಸಲಗರ್ ಸಿದ್ಧ ಮಾಡಿಸಿದ್ದಾರೆ.
ನಾಳೆ ವಿಜಯ ಸಂಕಲ್ಪ ರಥಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಅಮಿತ್ ಶಾಗೆ ಶಾಸಕ ಶರಣು ಸಲಗರ್ ಈ ವಿಶೇಷ ನೆನಪಿನ ಕಾಣಿಕೆಯಾದ ಬೆಳ್ಳಿ ಕಿರೀಟ ತೊಡಿಸಿ ಬೆಳ್ಳಿ ಗದೆ ನೀಡಲಿದ್ದಾರೆ.