ರಾಜ್ಯದ ಗಡಿ ಜಿಲ್ಲೆ ಅಕ್ಷರಶಃ ನಡುಗಿದೆ; ಕಾರಣ?

Webdunia
ಬುಧವಾರ, 1 ಮೇ 2019 (18:14 IST)
ರಾಜ್ಯದ ಗಡಿ ಜಿಲ್ಲೆಯೊಂದು ಅಕ್ಷರಶಃ ನಡುಗಿದ್ದು ಅಪಾರ ನಷ್ಟಕ್ಕೆ ಒಳಗಾಗಿದೆ.

ಇತ್ತೀಚೆಗೆ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ ಅಕ್ಷರಶಃ ನಲುಗಿದೆ. ಚಾಮರಾಜನಗರ ತಾಲ್ಲೂಕಿನ ಕಿಲಗೆರೆ ಹಾಗೂ ಸುತ್ತ ಮುತ್ತ ಗ್ರಾಮಗಳಲ್ಲಿ ಬಿದ್ದ ಧಾರಾಕಾರ ಮಳೆ ಹಾಗೂ ಬಿರುಗಾಳಿಯಿಂದಾಗಿ ನೂರಾರು ಎಕರೆ ಬಾಳೆ ಬೆಳೆ ನಷ್ಟವಾಗಿದೆ.

ಗಾಳಿ ಮಳೆಗೆ ಕಿಲಗೆರೆ ಗ್ರಾಮದ ನಾಗಪ್ಪ ಎಂಬುವರು 1.5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ  2000, ಶಶಿರವರ 1000, ಶಿವಸ್ವಾಮಿ ರವರ 1500,  ಮಹಾದೇವಪ್ಪರವರ 1500 ಬಾಳೆಕಟ್ಟೆ ಸಂಪೂರ್ಣ ನೆಲಕ್ಕುರುಳಿದೆ.  ಅಂಗಡಿ ಪುಟ್ಟಮಲ್ಲಪ್ಪ, ಚಿಕ್ಕಸ್ವಾಮಿ, ಚಿಕ್ಕಹೂಳೆಯ ರಾಮಚಂದ್ರ ರವರಿಗೆ ಸೇರಿದ ತೆಂಗು ಹಾಗೂ ಜೋಳದ ಬೆಳೆ ಹಾನಿಗೀಡಾಗಿದೆ. 

ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ ಸೇರಿದಂತೆ ಇನ್ನಿತರಡೆ ಸುಮಾರು 200 ಕ್ಕೂ ಹೆಚ್ಚು ತೆಂಗಿನಮರಗಳು, 100 ಕ್ಕೂ ಹೆಚ್ಚು ಬೇವಿನಮರಗಳು ನಾಶವಾಗಿವೆ. ಧಾರಕಾರ ಮಳೆಯಿಂದಾಗಿ ಈ ಭಾಗದ ರೈತರು ಕಂಗಾಲಾಗಿದ್ದಾರೆ. ಚಾಮರಾಜನಗರ ಜಿಲ್ಲಾಧಿಕಾರಿ ಬಿ. ಬಿ. ಕಾವೇರಿ ರೈತರ ಹೂಲ-ಗದ್ದೆ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಮೋಸಗಾಗಿ ರೈಲು ನಿಲ್ಲಿಸಲಿಲ್ಲ: ರೈಲ್ವೇ ಇಲಾಖೆಯಿಂದ ಸ್ಪಷ್ಟನೆ

ಬೆಂಗಳೂರಿನ ಆಚೆಗೆ ಮತ್ತಷ್ಟು ಬೆಂಗಳೂರುಗಳನ್ನು ನಿರ್ಮಿಸಲು ನಮ್ಮ ಸರ್ಕಾರ ಮುಂದಾಗಿದೆ

ನಿರಂಜನ್ ಇನ್ನಿಲ್ಲ ಎಂಬ ಸುದ್ದಿ ನನ್ನ ಹೃದಯವನ್ನು ಆಳವಾಗಿ ಅಲುಗಾಡಿಸಿದೆ

ವೈದ್ಯರ ಮೇಲಿನ ಹಲ್ಲೆ ಪ್ರಕರಣ, ಶಿವಸೇನಾ ಸೇನಾ ಕಾರ್ಪೋರೇಟರ್‌ ಮಹೇಶ್ ಮ್ಹಾತ್ರೆ ಅರೆಸ್ಟ್

ನಿರಂತರ ಮಳೆಗೆ ಕುಸಿದ ಬೃಹತ್ ಕಟ್ಟಡ, 19ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ

ಮುಂದಿನ ಸುದ್ದಿ
Show comments