Publish Date: Wed, 01 May 2019 (17:48 IST)
Updated Date: Wed, 01 May 2019 (17:55 IST)
ಸಂಜೆ ಸುರಿದ ಭಾರೀ ಮಳೆಗೆ ಅಪಾರ ಹಾನಿಯಾಗಿದೆ. ಇದರ ನಡುವೆ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದಿದೆ. ಸಿಡಿಲು ಬೆಂಕಿಯಾಗಿ ಮರವನ್ನು ಬಲಿಪಡೆದ ಲೈವ್ ಚಿತ್ರಗಳು ಇಲ್ಲಿವೆ.
ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ನಷ್ಟವನ್ನುಂಟು ಮಾಡಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತು ಉರಿದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ಗುಡ್ ಶಫರ್ಡ್ ನರ್ಸರಿ ಶಾಲೆಯ ಆವರಣದಲ್ಲಿನ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದಿದೆ. ಅದು ಹೊತ್ತಿ ಉರಿಯುತ್ತಿರುವುದನ್ನ ಅಲ್ಲಿದ್ದ ಯುವಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಕೆ.ಹೊನ್ನಲಗೆರೆಯ ಅನಿಲ್ ಎಂಬ ಯುವಕ ಶಾಲೆಯ ಆವರಣದಲ್ಲಿದ್ದಾಗಲೇ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿಯಲಾರಂಭಿಸಿದ್ದನ್ನು ಚಿತ್ರೀಕರಿಸಿದ್ದಾರೆ. ಕ್ಷಣಾರ್ಧದಲ್ಲಿ ಇಡೀ ತೆಂಗಿನ ಮರದ ತುಂಬೆಲ್ಲಾ ಬೆಂಕಿ ಆವರಿಸಿಕೊಂಡು ಹೊತ್ತಿ ಉರಿಯಿತು.