Publish Date: Sun, 08 Sep 2019 (19:39 IST)
Updated Date: Sun, 08 Sep 2019 (19:46 IST)
ಕಳೆದುಹೋಗಿದ್ದ ಚಿನ್ನದ ಸರವನ್ನು ರೋಬೋಟ್ ತಂದು ಕೊಟ್ಟ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಕತ್ತರಘಟ್ಟದ ಕೆರೆಯಲ್ಲಿ ಗಣಪತಿ ವಿಸರ್ಜನೆ ವೇಳೆ ಕಳೆದುಹೋಗಿತ್ತು ಸುಮಾರು 22 ಗ್ರಾಂ ಚಿನ್ನದ ಸರ.
ರೋಬೋಟ್ ಕೆರೆಯಲ್ಲಿನ ಚಿನ್ನದ ಸರವನ್ನು ತಂದು ಕೊಟ್ಟಿದೆ. ಮಂಜೇಗೌಡರವರು ರೋಬೋಟ್ ಯಂತ್ರ ಬಳಸಿ ಕೆರೆಯಲ್ಲಿದ್ದ ಚಿನ್ನದ ಸರವನ್ನ ಪತ್ತೆಹಚ್ಚಿದ್ದಾರೆ.
ನೂತನ ಸಾಹಸ ಕಾರ್ಯ ಮಾಡಿದ ಮಂಜೇಗೌಡರ ಕಾರ್ಯದಿಂದ ಜನತೆ ಖುಷ್ ಆಗಿದ್ದಾರೆ.
ಗಣೇಶ ಮೂರ್ತಿ ವಿಸರ್ಜನೆ ಮಾಡುವಾಗ ಪುರಸಭೆ ಸದಸ್ಯ ಲೋಕೇಶ್ ಅವರ ಚಿನ್ನದ ಸರ ಕೆರೆಯಲ್ಲಿ ಕಳೆದುಹೋಗಿತ್ತು.