ಲಕ್ಷ ಲಕ್ಷ ಮೀನುಗಳ ಮಾರಣ ಹೋಮ ನಡೆದಿರೋ ಘಟನೆ ವರದಿಯಾಗಿದೆ.
ಕೆರೆಯ ನೀರಿಗೆ ಕಲುಷಿತ ನೀರು ಸೇರಿ ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳು ಸಾವನ್ನಪ್ಪಿರುವಂತಹ ಘಟನೆ ಕರ್ನಾಟಕ -ತಮಿಳುನಾಡು ಗಡಿ ಮಾರಗೊಂಡಪಲ್ಲಿ ಕೆರೆಯಲ್ಲಿ ನಡೆದಿದೆ.
ಈ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು 3 ಲಕ್ಷಕ್ಕೂ ಹೆಚ್ಚು ಮೀನು ಮರಿಗಳನ್ನು ಬಿಟ್ಟಿದ್ದು ಕೆರೆಗೆ ಬೆಂಗಳೂರಿನ ವರ್ತೂರು ಕೆರೆಯ ಕಲುಷಿತ ನೀರು ಹರಿದು ಬರುತ್ತದೆ.
ಇದರಿಂದಲೇ ರಾತ್ರಿ ಲಕ್ಷಾಂತರ ಮೀನುಗಳ ಮಾರಣಹೋಮವಾಗಿದೆ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ. ಇನ್ನು ವರ್ತೂರು ಕೆರೆಯ ಕಲುಷಿತ ನೀರಿನಿಂದ ಈಗಾಗಲೇ ಅಲ್ಲಿನ ಸುತ್ತಮುತ್ತಲಿನ ಜನರಿಗೆ ಸಾಕಷ್ಟು ತೊಂದರೆಯಾಗಿದೆ.
ಇದೀಗ ಆ ನೀರು ಹರಿದು ಹೋಗುವ ಕೆರೆಗಳಲ್ಲಿಯೂ ಸಹ ಮೀನುಗಳ ಸಾವು ಹಾಗೂ ನೊರೆ ಸಮಸ್ಯೆ ಕಾಡುತ್ತಿದೆ. ಮೀನುಗಳ ಸಾವಿನ ನಂತರ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೀನುಗಳ ಸಾವಿಗೆ ನಿಖರ ಕಾರಣ ಏನು ಎಂಬುದಕ್ಕೆ ಕೆರೆಯ ನೀರು ಹಾಗು ಮೀನುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ.