Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚತುರ್ಥಿಯೆಂದು ಗಣೇಶ ಮೂರ್ತಿಯ ಪ್ರತಿಷ್ಠಾಪನೆಗೂ ಮುನ್ನ ಮಾಡಿ ಈ ಕೆಲಸ

ಚತುರ್ಥಿಯೆಂದು ಗಣೇಶ ಮೂರ್ತಿಯ  ಪ್ರತಿಷ್ಠಾಪನೆಗೂ ಮುನ್ನ ಮಾಡಿ ಈ ಕೆಲಸ
ಬೆಂಗಳೂರು , ಭಾನುವಾರ, 1 ಸೆಪ್ಟಂಬರ್ 2019 (06:51 IST)
ಬೆಂಗಳೂರು : ಗಣೇಶನ ವ್ರತವನ್ನು ಶುಕ್ಲಪಕ್ಷದ ಭಾದ್ರಪದ ಮಾಸ ಚತುರ್ತಿಯ ದಿನದಂದು ಆಚರಿಸಲಾಗುತ್ತದೆ. ಗಣೇಶ ಕೈಲಾಸದಿಂದ ಭೂಲೋಕಕ್ಕೆ ಬಂದು ತನ್ನ ತಾಯಿಯನ್ನು ಮರಳಿ ಕರೆದುಕೊಂಡು ಹೋಗಲು ತನ್ನ ಅಜ್ಜಿಯ ಮನೆಗೆ ಬಂದ ದಿನವನ್ನೇ ಗಣೇಶ ಚತುರ್ಥಿಯೆಂದು ಆಚರಣೆ ಮಾಡಲಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ.ಈ ಗಣೇಶನನ್ನು ಶ್ರದ್ದೆ,ಭಕ್ತಿಯಿಂದ ಶ್ರದ್ದೆಯಿಂದ ಹೇಗೆ ಪೂಜೆ ಮಾಡಬೇಕು ಎಂದುಬನ್ನು ನೋಡೋಣ



ಗಣೇಶ ಚತುರ್ಥಿ ಹಬ್ಬದಂದು ಬೆಳಗಿನ ಜಾವ ಸೂರ್ಯೋದಯಕ್ಕೆ ಮುಂಚೆ ಎದ್ದು ಮನೆಯನ್ನು ಸ್ವಚ್ಛ ಮಾಡಬೇಕು,ನಂತರ ಹಾಲು ಅಥವಾ  ಎಣ್ಣೆಯನ್ನು  ಹಚ್ಚಿಕೊಂಡು ತಲೆಗೆ  ಸ್ನಾನ ಮಾಡಬೇಕು.ವ್ರತ ಮಾಡುವವರು ಮಡಿವಸ್ತ್ರ ಧರಿಸಬೇಕು. ಮೂರ್ತಿಯನ್ನು ಸ್ಥಾಪನೆ ಮಾಡುವಾಗ ಮೊದಲಿಗೆ ಮಣೆಯ ಮದ್ಯ ಭಾಗದಲ್ಲಿ ಒಂದು ಮುಷ್ಟಿ ಅಕ್ಷತೆಯನ್ನು ಇಟ್ಟು  ಇದರ ಮೇಲೆ ,ಅರಿಶಿನ, ಕುಂಕುಮದಿಂದ ಸ್ವಸ್ತಿಕ್ ಚಿಹ್ನೆಯನ್ನು  ರಂಗೋಲಿಯ ಪುಡಿಯಲ್ಲಿ  ಬಿಡಿಸಬೇಕು.ಹೊಸ ಕೆಂಪು ವಸ್ತ್ರವನ್ನು ಮಣೆಯ ಮೇಲೆ ಹಾಸಬೇಕು.ಇದರ ಮೇಲೆ ತಟ್ಟೆ ಅಥವಾ ಬಾಳೆ ಎಲೆಯನ್ನು ಇಟ್ಟು ಅದರಲ್ಲಿ ಅಕ್ಕಿ ಹಾಕಬೇಕು ನಂತರ ಗಣೇಶನನ್ನು ಸ್ಥಾಪಿಸಬೇಕು.

 

ಹೂ,ಹಣ್ಣುಗಳಿಂದ ದೇವರನ್ನು ಅಲಂಕರಿಸಿದ ಬಳಿಕ ವಿನಾಯಕನಿಗೆ ಷೋಡೋಶೋಪಚಾರ ಪೂಜೆಯನ್ನು ಮಾಡಿ ದೀಪಾರಾಧನೆ ಮಾಡಬೇಕು. ಬಳಿಕ ಒಳ್ಳೆಯ ದಿನ ಹಾಗೂ ಸಮಯ ನೋಡಿಕೊಂಡು ಗಣಪನ ಮೂರ್ತಿಯನ್ನು ಶ್ರದ್ದೆ,ಭಕ್ತಿಯಿಂದ, ಹರಿಯುವ ನೀರಿನಲ್ಲಿ ವಿಸರ್ಜಿಸಿದರೆ ಉತ್ತಮ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರ ನಕ್ಷತ್ರದವರಿಗೆ ಯಾವ ಅಕ್ಷರದಿಂದ ಆರಂಭವಾಗುವ ಹೆಸರಿಡಬೇಕು?