Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮತದಾರರ ಹೆಸರನ್ನು ಡಿಲೀಟ್​​ ಮಾಡಿಲ್ಲ-ಚುನಾವಣಾಧಿಕಾರಿ ಮನೋಜ್​​ ಕುಮಾರ್​​ ಮೀನಾ

ಮತದಾರರ ಹೆಸರನ್ನು ಡಿಲೀಟ್​​ ಮಾಡಿಲ್ಲ-ಚುನಾವಣಾಧಿಕಾರಿ ಮನೋಜ್​​ ಕುಮಾರ್​​ ಮೀನಾ
bangalore , ಮಂಗಳವಾರ, 22 ನವೆಂಬರ್ 2022 (19:15 IST)
ಜಾತಿ, ಧರ್ಮದ ಆಧಾರದಲ್ಲಿ ಕೆಲ ಸಮುದಾಯದ ಹೆಸರನ್ನು ಮತಪಟ್ಟಿಯಿಂದ ಡಿಲೀಟ್​​ ಮಾಡಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್​​ ಕುಮಾರ್​​ ಮೀನಾ ಸ್ಪಷ್ಟನೆ ನೀಡಿದ್ದಾರೆ. ನಿರ್ದಿಷ್ಟ ಸಮುದಾಯಗಳ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂಬ ವರದಿ ಸುಳ್ಳು. ಮತದಾರರ ಪಟ್ಟಿ ಯಾರೊಬ್ಬರ ಜಾತಿ, ಧರ್ಮದ ಮಾಹಿತಿಯನ್ನು ಹೊಂದಿಲ್ಲ. ನಿಧನರಾದ ಸ್ಥಳಾಂತರಗೊಂಡವರ ಹೆಸರುಗಳನ್ನು ನಿಯಮದಂತೆ ಡಿಲೀಟ್​ ಮಾಡಲಾಗಿದೆ. ಒಂದೇ ವ್ಯಕ್ತಿಗೆ ಅನೇಕ ಹೆಸರಿರುವ ಸಾಧ್ಯತೆಯ ಬಗ್ಗೆ ಸಾಫ್ಟ್​​​ವೇರ್​ ಬಳಸಿ ಪತ್ತೆ ಮಾಡಲಾಗುತ್ತದೆ. ಅಂತಹ ಪ್ರಕರಣಗಳಲ್ಲಿ ಹೆಸರನ್ನು ಡಿಲೀಟ್​ ಮಾಡಲಾಗಿದೆ ಎಂದು ತಿಳಿಸಿದರು. ಈಗಾಗಲೇ 2023 ಮತದಾರರ ಪಟ್ಟಿಯ ಕರುಡನ್ನು ಸಾರ್ವಜನಿಕ ಆಕ್ಷೇಪಣೆ ಸಲ್ಲಿಸಲು ಪ್ರಕಟಿಸಲಾಗಿದೆ. ಡಿಸೆಂಬರ್​​ 12ರ ವರೆಗೆ ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಹೆಸರು ಬಿಟ್ಟು ಹೋದವರು ಅರ್ಜಿ ಸಲ್ಲಿಸಿ ತಮ್ಮ ಹೆಸರನ್ನು ಸೇರಿಸುವುದು, ಸರಿಪಡಿಸುವುದು, ಹೊಸ ವಿಳಾಸಕ್ಕೆ ಹೆಸರು ಸ್ಥಳಾಂತರಿಸಬಹುದು ಎಂದು ಸೂಚಿಸಿದ್ದಾರೆ. ಈಗಾಗಲೇ ಕಾಂಗ್ರೆಸ್​ ಪಕ್ಷ, ಚಿಲುಮೆ ಸಂಸ್ಥೆಯು ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ ಖಾಸಗಿ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಗಂಭೀರ ಆರೋಪ ಮಾಡಿದೆ.  KPCC ಈ ಬಗ್ಗೆ ಚುಣಾವಣಾ ಆಯೋಗಕ್ಕೆ ದೂರು ನೀಡಿದ್ದು, FIR ಕೂಡ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾರೀಕ್ ಜಾತಕ ಕೆದಕಿದ ಖಾಕಿ ಪಡೆ