Publish Date: Wed, 12 Sep 2018 (17:24 IST)
Updated Date: Wed, 12 Sep 2018 (17:28 IST)
ಒಂಟಿ ಮನೆಯಲ್ಲಿ ಚಿನ್ನಾಭರಣ, ಹಣ ಹಾಗೂ ಇನ್ನಿತರ ವಸ್ತುಗಳನ್ನು ಕದಿಯುತ್ತಿದ್ದವನು ರೆಡ್ ಹ್ಯಾಡ್ ಸಿಕ್ಕಿಬಿದ್ದು ಒದೆ ತಿಂದ ಘಟನೆ ನಡೆದಿದೆ.
ಬೆಂಗಳೂರು ಹೊರವಲಯದಲ್ಲಿರುವ ನೆಲಮಂಗಲ ತಾಲೂಕಿನ ಅವಲಕುಪ್ಪೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಒಂಟಿ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ವೇಳೆ ಸೆರೆ ಸಿಕ್ಕ ಆರೋಪಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಇನ್ನೂ ಶಶಿಧರ್ ಎಂಬುವನು ಅವಲಕುಪ್ಪೆ ಗ್ರಾಮದ ಹನುಮಂತರಾಯಪ್ಪ ಎಂಬುವರ ತೋಟದ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ವೇಳೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ನಂತರ ಗ್ರಾಮಸ್ಥರು ಶಶಿಧರ್ ನನ್ನ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.