ರಾಜ್ಯ ಸರಕಾರ ಬಡವರಿಗೆಂದು ಉಚಿತವಾಗಿ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿ ಖಾಸಗಿ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವ ಸಂಗತಿ ಜನಸಾಮಾನ್ಯರ ಗಮನಕ್ಕೆ ಬಂದಿರಬಹುದು. ಅದಕ್ಕೆ ಮಂಗಳೂರಿನಲ್ಲಿ ತಾಜಾ ಉದಾಹರಣೆಯೊಂದು ಬೆಳಿಗ್ಗೆ ಪತ್ತೆಯಾಗಿದೆ.
ಮಂಗಳೂರಿನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಲಾರಿ ಕೆಎ -19- ಎಎ- 5508 ಇದರಲ್ಲಿ ಅಕ್ಕಿಯನ್ನು ಖಾಸಗಿ ಮಳಿಗೆಯಲ್ಲಿ ಮಾರಾಟ ಮಾಡಲು ತಯಾರಿ ನಡೆದಿತ್ತು. ಈ ಬಗ್ಗೆ ಸುಳಿವರಿತ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ದಿವಾಕರ್ ಪಾಂಡೇಶ್ವರ ಮತ್ತು ಇತರರು ಲಾರಿಯನ್ನು ಪದವಿನಂಗಡಿ ಬಳಿ ತಡೆದಿದ್ದಾರೆ. ಅಲ್ಲಿ ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ಅನ್ನಭಾಗ್ಯ ಅಕ್ಕಿಗೆ ಕೇಂದ್ರ ಸರಕಾರ ಕಿಲೋ ಗೆ 29 ರೂಪಾಯಿ ಮತ್ತು ರಾಜ್ಯ ಸರಕಾರ ಮೂರು ರೂಪಾಯಿ ಭರಿಸುತ್ತದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.