Publish Date: Wed, 12 Sep 2018 (14:36 IST)
Updated Date: Wed, 12 Sep 2018 (14:39 IST)
ಕೃಷ್ಣ ದೇಗುಲದಲ್ಲಿ ಕಳ್ಳತನ ಮಾಡಲಾಗಿದೆ. ತಡರಾತ್ರಿ ದೇವಸ್ಥಾನದ ಬಾಗಿಲು ಒಡೆದ ಕಳ್ಳರು, ಹುಂಡಿಯನ್ನು ಹೊತ್ತೈದು ಖಾಲಿ ಮಾಡಿ, ಹುಂಡಿ ಡಬ್ಬಿ ಯನ್ನು ರೈಲ್ವೆ ಟ್ರಾಕ್ ಮೇಲೆ ಎಸೆದಿದ್ದಾನೆ.
ಬಳ್ಳಾರಿಯ ರಾಯಲ್ ಕಾಲೋನಿಯ ಕೃಷ್ಣ ದೇಗುಲದಲ್ಲಿ ಕಳ್ಳತನ ಮಾಡಲಾಗಿದೆ. ತಡರಾತ್ರಿ ದೇವಸ್ಥಾನದ ಬಾಗಿಲು ಒಡೆದ ಕಳ್ಳ , ಹುಂಡಿಯನ್ನು ಹೊತ್ತೈದು ಖಾಲಿ ಮಾಡಿ, ಹುಂಡಿ ಡಬ್ಬಿ ಯನ್ನು ರೈಲ್ವೆ ಟ್ರಾಕ್ ಮೇಲೆ ಎಸೆದಿದ್ದಾನೆ. ಈ ಎಲ್ಲ ದೃಶ್ಯವಾಳಿಗಳು ದೇವಾಲಯ ಪಕ್ಕದ ಮನೆಯಲ್ಲಿ ಇಟ್ಟಿರುವ ಸಿ ಸಿ ಕ್ಯಾಮರದಲ್ಲಿ ರೆಕಾರ್ಡ್ ಆಗಿದೆ. ಕಳ್ಳನ ಮುಖ ಅಸ್ಪಷ್ಟವಾಗಿದ್ರು, ಘಟನೆ ಸಂಪೂರ್ಣ ಸನ್ನಿವೇಶ ರೆಕಾರ್ಡ್ ಆಗಿದೆ. ಕಳೆದ ತಿಂಗಳು ಕೂಡ ಇದೇ ರೀತಿ ಕಳ್ಳತನ ಮಾಡಲಾಗಿತ್ತು.
ಅಂದು ಮಾಡಿದ ಮತ್ತು ಇಂದು ಮಾಡಿದ ಕಳ್ಳ ಮತ್ತು ಕಳ್ಳತನ ಮಾಡಿದ ರೀತಿಯಲ್ಲಿ ಹೋಲಿಕೆ ಇದೆ ಎನ್ನಲಾಗುತ್ತಿದೆ. ಸದ್ಯ ಗಾಂಧಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಟಿವಿ ದಾಖಲೆ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.