Publish Date: Sun, 28 Jun 2020 (16:57 IST)
Updated Date: Sun, 28 Jun 2020 (16:59 IST)
ದೇಶಾದ್ಯಂತ ಕೊರೊನಾ ಆರ್ಭಟ ಮುಂದುವರಿದಿದ್ದರೆ ಪ್ರವಾಸಿಗರು ನೂರಾರು ಸಂಖ್ಯೆಯಲ್ಲಿ ಯಾವುದೇ ಭಯವಿಲ್ಲದೇ ಆ ಸ್ಥಳದಲ್ಲಿ ಸೇರಿದ್ದರು.
ಚಿಕ್ಕಮಗಳೂರು ಜಿಲ್ಲೆಗೆ ಭಾನುವಾರ ಪ್ರಯುಕ್ತ ಅತೀ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಹರಿದು ಬಂದಿದ್ದು, ಮುಳ್ಳಯ್ಯನಗಿರಿ ದತ್ತ ಪೀಠ ಈ ಭಾಗದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ .
ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರು ಮಾಸ್ಕ್, ಸಾಮಾಜಿಕ ಅಂತರ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮನವಿ ಮಾಡಿದ್ದಾರೆ. ಕೈ ಮರ ಚೆಕ್ ಪೋಸ್ಟಿನಲ್ಲಿ ಪ್ರತಿ ವಾಹನಗಳ ತಪಾಸಣೆ ಮಾಡಲಾಗುತ್ತಿದೆ.
ದಾಖಲಾತಿಗಳನ್ನು ಪರಿಶೀಲನೆ ಮಾಡಿ ವಾಹನಗಳನ್ನು ಒಳ ಬಿಡಲಾಗುತ್ತಿದೆ ಮತ್ತು ಇಲ್ಲಿ ಹೊಸ ಅರಣ್ಯ ತಪಾಸಣೆ ಗೇಟ್ ತೆರೆಯಲಾ ಗಿದೆ.