Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ಜಿಲ್ಲೆಯಲ್ಲಿ ನಿತ್ಯ 1000 ಕೊರೊನಾ ಟೆಸ್ಟ್

ಈ ಜಿಲ್ಲೆಯಲ್ಲಿ ನಿತ್ಯ 1000 ಕೊರೊನಾ ಟೆಸ್ಟ್
ಧಾರವಾಡ , ಬುಧವಾರ, 17 ಜೂನ್ 2020 (20:53 IST)
ಕೇಂದ್ರ ಮತ್ತು ಮಾರ್ಗಸೂಚಿಗಳ ಅನುಸಾರ ಕೋವಿಡ್ -19 ತಪಾಸಣೆ ಕಾರ್ಯ ನಡೆಯಲಿದೆ ಎಂದು ಸಚಿವರು ಹೇಳಿದ್ದಾರೆ.

ಕಿಮ್ಸ್ ನಲ್ಲಿ ಮೇಲ್ದರ್ಜೇಗೇರಿಸಿದ ವೈರಾಲಜಿ ಪ್ರಯೋಗಾಲಯ ಕಾರ್ಯಾರಂಭ ಮಾಡಿದ್ದು, ಇದು ಧಾರವಾಡ ಜಿಲ್ಲೆಯ ನಾಲ್ಕನೆಯ ಕೋವಿಡ್ ತಪಾಸಣೆ ಪ್ರಯೋಗಾಲಯವಾಗಿದೆ. ಜಿಲ್ಲೆಯಲ್ಲಿ ಪ್ರತಿನಿತ್ಯ ಸಾವಿರಕ್ಕೂ ಅಧಿಕ ಜನರ ತ್ವರಿತ ತಪಾಸಣೆ ಸಾಮರ್ಥ್ಯದ ಪ್ರಯೋಗಾಲಯಗಳಿವೆ. ಕೇಂದ್ರ ಮತ್ತು ಮಾರ್ಗಸೂಚಿಗಳ ಅನುಸಾರ ತಪಾಸಣೆ ಕಾರ್ಯ ಮುಂದುವರೆಯಲಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ತಪಾಸಣೆಗೆ ಒಳಪಡಿಸಿದ 24 ಗಂಟೆಗಳೊಳಗೆ ವರದಿ ಪಡೆಯಲು ಸಾಧ್ಯವಾಗುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಸುಧಾಕರ್ ಮತ್ತು ಆರೋಗ್ಯ ಸಚಿವರಾದ ಬಿ.ಶ್ರೀರಾಮುಲು ಅವರೊಂದಿಗೆ ಚರ್ಚಿಸಿ ಜಿಲ್ಲೆಯಲ್ಲಿ ಹೆಚ್ಚು ಪ್ರಯೋಗಾಲಯ ಸ್ಥಾಪನೆ ಕುರಿತು ಮನವರಿಕೆ ಮಾಡಿಕೊಡಲಾಗಿತ್ತು. ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಎನ್ ಡಿ ಆರ್ ಎಫ್ ಅನುದಾನದಲ್ಲಿ ಹೊಸ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಕಿಮ್ಸ್ ನಲ್ಲಿ ಎರಡು, ಡಿಮ್ಹಾನ್ಸ್ ಹಾಗೂ ಎನ್ ಎಮ್ ಆರ್ ಕೇಂದ್ರದಲ್ಲಿ ತಲಾ ಒಂದು ಪ್ರಯೋಗಾಲಗಳಿವೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾ ಕ್ಯಾತೆ : ಮೋದಿ ಅಡ್ವಾನ್ಸ್ ಎಂದ ಬಿಜೆಪಿ ಸಂಸದ