Publish Date: Wed, 15 Apr 2020 (10:04 IST)
Updated Date: Wed, 15 Apr 2020 (10:05 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ವಲಸೆಗಾರರ ಬದುಕು ಅತಂತ್ರವಾಗಿದೆ. ತಮ್ಮ ಊರಿಗೆ ತೆರಳಲಾಗದೇ ಬೀದಿಗೆ ಬಿದ್ದಿರುವ ವಲಸೆಗಾರರಿಗೆ ಏನು ಮಾಡಬಹುದು? ಐಡಿಯಾ ಕೊಡಿ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಾರ್ವಜನಿಕರಿಗೆ ಪ್ರಶ್ನಿಸಿದ್ದಾರೆ.
ಪೊಲೀಸ್ ಆಯುಕ್ತರು ಟ್ವೀಟ್ ಮೂಲಕ ಆಹ್ವಾನ ನೀಡುತ್ತಿದ್ದಂತೇ ಹಲವರು ತಮ್ಮದೇ ರೀತಿಯಲ್ಲಿ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.
ಈ ವಲಸೆಗಾರರನ್ನು ಗುಂಪುಗಳಾಗಿ ವಿಂಗಡಿಸಿ ರಸ್ತೆ ರಿಪೇರಿ ಮಾಡುವ ಕೆಲಸ ಕೊಡಿ ಎಂದು ಕೆಲವೆರು ಹೇಳಿದರೆ ಅವರಿಗೆ ರೇಷನ್ ಕೊಡಿ, ಧನ ಸಹಾಯ ಮಾಡಿ, ವಸತಿ ಸೌಕರ್ಯ ಒದಗಿಸಿ ಎಂದೆಲ್ಲಾ ಸಲಹೆ ನೀಡಿದ್ದಾರೆ.