Publish Date: Wed, 21 Jun 2023 (18:19 IST)
Updated Date: Wed, 21 Jun 2023 (18:25 IST)
ಸರಿಯಾದ ಸಮಯಕ್ಕೆ KSRTC ಬಸ್ಗಳು ಬಾರದ ಹಿನ್ನೆಲೆ ಬಸ್ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾದರಹಳ್ಳಿ ಗ್ರಾಮದಲ್ಲಿ ನಡೆದಿದೆ.. ಸಾದರನಹಳ್ಳಿಯಿಂದ ಚಿಕ್ಕನಾಯಕನಹಳ್ಳಿಗೆ ಪ್ರತಿನಿತ್ಯ ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳು KSRTC ಬಸ್ಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.. ಸರಿಯಾದ ಸಮಯಕ್ಕೆ KSRTC ಬಸ್ಗಳು ಬರುತ್ತಿಲ್ಲ ಹೀಗಾಗಿ ನಮ್ಮಗೆ ಶಾಲಾ ಹಾಗೂ ಕಾಲೇಜಿಗೆ ಹೋಗಲು ತಡವಾಗುತ್ತಿದೆ.. ಬರುವಂತಹ ಬಸ್ಗಳೆಲ್ಲವು ಭರ್ತಿಯಾಗುತ್ತವೆ ಅಂತಾ ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.