ಬೆಂಗಳೂರು : ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಥಮ ಹಾಗೂ ದ್ವಿತೀಯ ಪಿಯು ದಾಖಲಾತಿ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.
ಪ್ರಥಮ ಪಿಯುಸಿ ದಾಖಲಾತಿಗೆ ಸೆಪ್ಟೆಂಬರ್ 1 ರವರೆಗೆ ಅವಕಾಶ ನೀಡಲಾಗಿತ್ತು. ದ್ವಿತೀಯ ಪಿಯುಸಿಗೆ ಆ.30 ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಪ್ರಥಮ ಮತ್ತು ದ್ವಿತೀಯ ಪಿಯುಸಿ ಕೋರ್ಸ್ ಗಳಿಗೆ ಸೆಪ್ಟೆಂಬರ್ 11 ರವರೆಗೆ ದಂಡಶುಲ್ಕವಿಲ್ಲದೆ ಪ್ರವೇಶ ಪಡೆಯಬಹುದು. 670 ರೂ. ದಂಡಶುಲ್ಕದೊಂದಿಗೆ ಪ್ರವೇಶ ಪಡೆಯಲು ಸೆ.13 ರಿಂದ 25 ರವರೆಗೆ, 2890 ರೂ. ವಿಶೇಷ ದಂಡ ಶುಲ್ಕದೊಂದಿಗೆ ಸೆ.27 ರಿಂದ ಆ.5 ರವರೆಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ದಾಖಲಾತಿ ಪಡೆಯಬಹುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
2021-22 ನೇ ಸಾಲಿನ ಪ್ರಥಮ ಪಿಯು ಪ್ರವೇಶದಲ್ಲಿ ಹೆಚ್ಚುವರಿಯಾಗಿ 20 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಪದವಿ ಪೂರ್ವ ಶಿಕ್ಷಣ ಇಲಾಖೆ ಕಾಲೇಜುಗಳಿಗೆ ಅನುಮತಿ ನೀಡಿದೆ.