Webdunia - Bharat's app for daily news and videos

Install App

ಲಕ್ಷ ಕೋಟಿ ದಾಟಿದ ಜಿ.ಎಸ್.ಟಿ ಯ ಆಗಸ್ಟ್ ಕಲೆಕ್ಷನ್

Webdunia
ಗುರುವಾರ, 2 ಸೆಪ್ಟಂಬರ್ 2021 (10:04 IST)
ಸತತ ಎರನೇ ತಿಂಗಳಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಮಟ್ಟ ದಾಟಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಆಗಸ್ಟ್ನಲ್ಲಿ 1.12 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.

ವರ್ಷದ ಹಿಂದೆ ಇದೇ ತಿಂಗಳಲ್ಲಿ ಸಂಗ್ರಹಿಸಿದ್ದಕ್ಕಿಂತ 30% ಹೆಚ್ಚಿನ ಮೊತ್ತವನ್ನು ಈ ಬಾರಿ ಸರ್ಕಾರಗಳ ಬೊಕ್ಕಸ ಸೇರಿಸಲಾಗಿದೆ. ಸಂಗ್ರಹವಾದ 1.12 ಲಕ್ಷ ಕೋಟಿ ರೂಪಾಯಿಗಳಲ್ಲಿ ಕೇಂದ್ರ ಜಿಎಸ್ಟಿ 20,522 ಕೋಟಿ ರೂ.ಗಳಿದ್ದರೆ, ರಾಜ್ಯಗಳ ಪಾಲಿಗೆ 26,605 ಕೋಟಿ ರೂ.ಗಳು ಹಾಗೂ ಸಮಗ್ರ ಜಿಎಸ್ಟಿ 56,247 ಕೋಟಿ ರೂಪಾಯಿಗಳಾಗಿವೆ. ಇದರಲ್ಲಿ ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 26,884 ಕೋಟಿ ರೂಪಾಯಿಗಳೂ ಸೇರಿವೆ. ಸೆಸ್ ರೂಪದಲ್ಲಿ 8,646 ಕೋಟಿ ರೂ.ಗಳು ಸಂಗ್ರಹವಾಗಿವೆ ಎಂದು ವಿತ್ತ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಜುಲೈ 2021ರಲ್ಲಿ ಜಿಎಸ್ಟಿಯ ಕಲೆಕ್ಷನ್ 1.16 ಲಕ್ಷ ಕೋಟಿ ರೂ. ಇತ್ತು. 2020ರ ಆಗಸ್ಟ್ನಲ್ಲಿ 86,449 ಕೋಟಿ ರೂ. ಗಳಷ್ಟಿದ್ದ ಜಿಎಸ್ಟಿ ಸಂಗ್ರಹ 2019ರ ಇದೇ ತಿಂಗಳಲ್ಲಿ 98,202 ಕೋಟಿ ರೂ. ಗಳಷ್ಟಿತ್ತು. ಸತತ ಒಂಬತ್ತು ತಿಂಗಳು ಲಕ್ಷ ಕೋಟಿಗೂ ಅಧಿಕ ಸಂಗ್ರಹ ಕಂಡ ಜಿಎಸ್ಟಿ ಕಲೆಕ್ಷನ್ ಜೂನ್ ತಿಂಗಳಲ್ಲಿ ಕೋವಿಡ್ ಎರಡನೇ ಅಲೆಯ ಕಾರಣ ಕುಸಿತ ಕಂಡಿತ್ತು.
"ಆರ್ಥಿಕ ಪ್ರಗತಿಯೊಂದಿಗೆ, ತೆರಿಗೆ ವಂಚನೆ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ, ಅದರಲ್ಲೂ ನಕಲಿ ಬಿಲ್ ಸೃಷ್ಟಿಕರ್ತರ ಮೇಲೆ ತೀವ್ರವಾದ ಕ್ರಮಗಳಿಂದಾಗಿ ಜಿಎಸ್ಟಿ ಸಂಗ್ರಹದಲ್ಲಿ ವೃದ್ಧಿಯಾಗಿದೆ. ಬರುವ ತಿಂಗಳುಗಳಲ್ಲೂ ಸಹ ಜಿಎಸ್ಟಿ ಕಲೆಕ್ಷನ್ ಜೋರಾಗಿರುವ ನಿರೀಕ್ಷೆಯಿದೆ" ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments