Publish Date: Fri, 14 Jul 2023 (17:55 IST)
Updated Date: Fri, 14 Jul 2023 (18:59 IST)
ವಿಜಯಪುರದ ಸೈನಿಕ ಶಾಲೆ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ವಜ್ರ ಮಹೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.. ಕಾರ್ಯಕ್ರಮದಲ್ಲಿ ಮಳೆಯ ನಡುವೆಯೇ ರಕ್ಷಣಾ ವಿದ್ಯಾರ್ಥಿಗಳು ಕವಾಯತು ಪ್ರದರ್ಶಿಸಿದರು. ಜೋರಾದ ಮಳೆಯಲ್ಲಿಯೇ ವಾಯುಸೇನೆಯ ಡ್ರೀಲ್ ತಂಡದ ವಿದ್ಯಾರ್ಥಿಗಳು ವಿಶೇಷ ಪ್ರದರ್ಶನ ನೀಡಿ ಎಲ್ಲರ ಕಣ್ಮನ ಸೆಳೆದರು. ಇನ್ನು ವಿಶೇಷ ಘಟನೆಗೆ ಕಾರ್ಯಕ್ರಮ ಸಾಕ್ಷಿಯಾಯ್ತು, ಮಳೆಯಲ್ಲಿ ಸಿಲುಕಿದ್ದ ವೃದ್ಧೆಯನ್ನು ಕೊಡೆ ಹಿಡಿದು ವಿದ್ಯಾರ್ಥಿಗಳು ಸಹಾಯ ಮಾಡದರು. ಇವೆಲ್ಲ ದೃಶ್ಯಾವಳಿಗಳು ನೋಡುಗರ ಕಣ್ಮನ ಸೆಳೆದವು