Publish Date: Fri, 14 Jul 2023 (15:22 IST)
Updated Date: Fri, 14 Jul 2023 (15:25 IST)
ಗೃಹಲಕ್ಷ್ಮಿ ಯೋಜನೆ ಜಾರಿ ವಿಚಾರ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆ ಜಾರಿ ವಿಚಾರದಲ್ಲಿ ಯಾವ ಗೊಂದಲ ಕೂಡಾ ಇಲ್ಲ.. ಆದರೆ ದಿನಾಂಕದ ಬಗ್ಗೆ ಮಾತ್ರ ಗೊಂದಲವಿದೆ ಎಂದಿದ್ದಾರೆ. ಇನ್ನು ಆಧಾರ್ ಲಿಂಕ್ ಇರುವ ಅಕೌಂಟ್ಗೆ ಮಾತ್ರ ಹಣ ಹಾಕಬೇಕಾ ಅಥವಾ ಆಧಾರ್ ಲಿಂಕ್ ಇಲ್ಲದೇ ಇರುವ ಅಕೌಂಟ್ಗೂ ಹಣ ಹಾಕಬೇಕಾ ಅನ್ನೋದರ ಬಗ್ಗೆ ಗೊಂದಲವಿದೆ. ಅದು ಬಿಟ್ಟರೆ ಫಲಾನುಭವಿಗಳಿಗೆ ನೀಡಲು ಹಣ ರೆಡಿ ಇದೆ. ಫಲಾನುಭವಿಗಳ ಲಿಸ್ಟ್ ಕೂಡಾ ರೆಡಿ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ