Daily Horoscope
✕

ಚಂದ್ರನಿಗೆ ಅಪ್ಪಳಿಸಲಿದೆ SpaceX ರಾಕೆಟ್

Webdunia
ಗುರುವಾರ, 27 ಜನವರಿ 2022 (21:26 IST)
ಏಳು ವರ್ಷಗಳ ಹಿಂದೆ ಉಡಾವಣೆಯಾದ ಸ್ಪೇಸ್‍ಎಕ್ಸ್ ರಾಕೆಟ್ ಮಾರ್ಚ್ ತಿಂಗಳಿನಲ್ಲಿ ಚಂದ್ರನಿಗೆ ಅಪ್ಪಳಿಸಲಿದೆ ಎಂದು ಖಗೋಳಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.
ಫೆಬ್ರವರಿ 2015 ರಲ್ಲಿ ಅಂತರಗ್ರಹ ಕಾರ್ಯಾಚರಣೆಯ ಭಾಗವಾಗಿ ಉಡಾವಣೆಯಾದ ಫಾಲ್ಕನ್ 9 ಬೂಸ್ಟರ್ ರಾಕೆಟ್ ಇಂಧನ ಖಾಲಿಯಾಗಿ ಕಕ್ಷೆಯಲ್ಲಿ ಅಸ್ತವ್ಯಸ್ತವಾಗಿ ಸುತ್ತುತ್ತಿದೆ.
 
ಈಗ ನಾಲ್ಕು ಟನ್ ತೂಕದ ಸೆಕೆಂಡ್‍ಗೆ 2.58 ಕಿ.ಮೀ ವೇಗದಲ್ಲಿ ಸಂಚರಿಸುವ ರಾಕೆಟ್ ಚಂದ್ರನನ್ನು ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ.
ಖಗೋಳವಿಜ್ಞಾನಿ ಬಿಲ್ ಗ್ರೇ ಈ ರಾಕೆಟ್ ಪಥವನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ರಾಕೆಟ್ ವೀಕ್ಷಿಸುತ್ತಿರುವ ಖಗೋಳಶಾಸ್ತ್ರಜ್ಞರು ಡೇಟಾವನ್ನು ಸಂಗ್ರಹಿಸುತ್ತಿದ್ದು, ಯಾವಾಗ ರಾಕೆಟ್ ಚಂದ್ರನಿಗೆ ಅಪ್ಪಳಿಸಬಹುದೆಂದು ಲೆಕ್ಕಾಚಾರ ಮಾಡುತ್ತಿದ್ದಾರೆ.
ಮಾರ್ಚ್ 4 ರಂದು ಈ ರಾಕೆಟ್ ಅಪ್ಪಳಿಸಬಹುದು ಎಂದು ಅಂದಾಜಿಸಲಾಗಿದ್ದರೂ ಚಂದ್ರನ ಯಾವ ಭಾಗಕ್ಕೆ ಅಪ್ಪಳಿಸಬಹುದು ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇದು ಬಹಳ ಕಠಿಣ ವಿಚಾರ ಎಂದು ತಜ್ಞರು ತಿಳಿಸಿದ್ದಾರೆ.
ಯಾವುದೇ ಉದ್ದೇಶವಿಲ್ಲದೇ ಬಾಹ್ಯಾಕಾಶದ ಕಸವೊಂದು ಚಂದ್ರನ ಮೇಲೆ ಅಪ್ಪಳಿಸುತ್ತಿರುವುದು ಇದೇ ಮೊದಲು. ಅಪ್ಪಳಿಸಿದ ನಂತರ ಸೃಷ್ಟಿಯಾಗುವ ಕುಳಿಯ ಬಗ್ಗೆ ತಿಳಿಯುವ ವೈಜ್ಞಾನಿಕ ಕುತೂಹಲ ಹೆಚ್ಚಾಗಿದೆ ಎಂದು ಬಿಲ್ ಗ್ರೇ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಸ್ಲಿಂ ಟೋಪಿ ಧರಿಸಿ ತಿರುವಣ್ಣಾಮಲೈ ದೇವಸ್ಥಾನಕ್ಕೆ ಬಂದ ಸಚಿವರ ಸಹಾಯಕ: ಹೊರನಡೆಯಿರಿ ಎಂದು ಭಕ್ತರ ಆಕ್ರೋಶ Video

ಮಸೀದಿ ಚರ್ಚ್ ನಲ್ಲಿ ಓಂ ಬಿಡಿಸಲು ಬಿಡ್ತೀರಾ: ಅರ್ಕೇಶ್ವರ ದೇವಸ್ಥಾನದ ಗೋಡೆ ಮೇಲೆ ಮಸೀದಿ, ಶಿಲುಬೆ ಚಿತ್ರಕ್ಕೆ ಆಕ್ರೋಶ Video

ಪಾಸ್ಪೋರ್ಟ್ ಕಳೆದುಹೋಗಿದೆಯೇ, ಆತಂಕ ಪಡಬೇಡಿ, ತಕ್ಷಣವೇ ಈ ಪ್ರಮುಖ ಹಂತಗಳನ್ನು ಅನುಸರಿಸಿ

ಸಿಜೆಪಿ, ಕಾಂಗ್ರೆಸ್ ಎಸ್ಐಆರ್ ಪ್ರತಿಭಟನೆ ನಡುವೆ ಹೈರಾಣಾಗಿದ್ದು ವ್ಯಾಪಾರಿಗಳು: ದೆಹಲಿ ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವೇನು

ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ರ‍್ಯಾಲಿ: ಎಸ್‌ಐಆರ್ ವಿವಾದದ ಪ್ರತಿಭಟನೆಗೆ ಗ್ರೀನ್ ಸಿಗ್ನಲ್

ಮುಂದಿನ ಸುದ್ದಿ
Show comments