ಬೀಜಿಂಗ್ : ಭೂಮಿಯ ಮೇಲೆ ಚಂದ್ರನ ಪರಿಸರವನ್ನು ಅನುಕರಿಸಲು ಇದೀಗ ಚೀನಾ ಕೃತಕ ಚಂದ್ರನನ್ನು ನಿರ್ಮಿಸಿದೆ.
ಇದರಿಂದ ಬಹ್ಯಾಕಾಶ ಯಾನಿಗಳಿಗೆ ತರಬೇತಿ ನೀಡಲು ಬಹು ಉಪಯುಕ್ತವಾಗಲಿದೆ.
ಹೊಸ ತಂತ್ರಜ್ಞಾನ ಹಾಗೂ ಭವಿಷ್ಯದ ಕಾರ್ಯಾಚರಣೆಗಳನ್ನು ಪರೀಕ್ಷಿಸಲು ಕೃತಕ ಮಿನಿ ಚಂದ್ರನನ್ನು ಚೀನಾ ನಿರ್ಮಿಸಿದೆ. ಜಿಯಾಂಗ್ಸು ಪ್ರಾಂತ್ಯದ ಕುಝೌನಲ್ಲಿರುವ ಈ ಹೊಸ ಸೌಲಭ್ಯ ವಿಶ್ವದಲ್ಲಿಯೇ ಮೊದಲನೆಯದಾಗಿದೆ.
ಈ ಕೃತಕ ಮಿನಿ ಚಂದ್ರ ಸುಮಾರು 2 ಅಡಿ ವ್ಯಾಸ ಹೊಂದಿದ್ದು, ಚಂದ್ರನಂತೆ ಕೃತಕ ಮೇಲ್ಮೈಯನ್ನು ರಚಿಸಲು ಹಗುರವಾದ ಕಲ್ಲು ಮತ್ತು ಧೂಳಿನಿಂದ ಮಾಡಲಾಗಿದೆ. ಈ ಚಂದ್ರನಲ್ಲಿ ಗುರುತ್ವಾಕರ್ಷಣೆಯನ್ನೂ ಕಡಿಮೆ ಮಾಡಿರುವುದು ವಿಶೇಷ.
ವಿಮಾನ ಅಥವಾ ಡ್ರಾಪ್ ಟವರ್ಗಳಲ್ಲಿ ಕಡಿಮೆ ಗುರುತ್ವಾಕರ್ಷಣೆಯ ವಾತಾವರಣವನ್ನು ಸೃಷ್ಟಿಸಬಹುದು. ಆದರೆ ಅದು ಕೇವಲ ಕ್ಷಣಿಕವಾಗಿರುತ್ತದೆ.