Publish Date: Tue, 25 Sep 2018 (20:33 IST)
Updated Date: Tue, 25 Sep 2018 (20:36 IST)
ನಟ ದರ್ಶನ್ ಅಪಘಾತ ಪ್ರಕರಣ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಕೇರಳದ ಖ್ಯಾತ ಸಂಗೀತ ಸಂಯೋಕರ ಕಾರು ಅಪಘಾತವಾಗಿದ್ದು, ಮುದ್ದಾದ ಪುತ್ರಿ ಸಾವನ್ನಪ್ಪಿದ್ದಾಳೆ.
ಕೇರಳದ ಗಾಯಕ ಬಾಲಭಾಸ್ಕರ್ ಹಾಗೂ ಕುಟುಂಬದವರು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು, ಬಾಲಭಾಸ್ಕರ್ ಹಾಗೂ ಅವರ ಪತ್ನಿ ಲಕ್ಷ್ಮೀ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಅವರ ಪುತ್ರಿ 2 ವರ್ಷದ ತೇಜಸ್ವಿನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ತಿರುವಂತನಪುರಂನ ಪಳ್ಳಿಪುರಂ ಹತ್ತಿರ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.