Publish Date: Fri, 14 Sep 2018 (11:39 IST)
Updated Date: Fri, 14 Sep 2018 (11:40 IST)
ಬೆಂಗಳೂರು : ಕಿರಿತೆರೆ ನಟಿಯೊಬ್ಬಳು ಮಹಿಳಾ ಸಂಘದ ಹಣಕ್ಕಾಗಿ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ಮಾಡಿ ಹಣ ಮತ್ತು ಕಾರು ಸುಲಿಗೆ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಈ ಹಿಂದೆ ನಟಿ ಸುಶ್ಮಿತಾ ಅವರನ್ನು ಆದಿಶಕ್ತಿ ಮಹಿಳಾ ಸಂಘದ ರಾಜ್ಯಧ್ಯಕ್ಷೆಯಾಗಿ ಮಾಡುವುದಾಗಿ ನಂಬಿಸಿ ರಘ ಎಂಬಾತ ಆಕೆಯಿಂದ ಲಕ್ಷಾಂತರ ರೂಪಾಯಿ ದೂಚಿದ ಘಟನೆ ವರದಿಯಾಗಿತ್ತು. ಇದೀಗ ನಟಿ ಸುಶ್ಮಿತಾ ಅವರು ತನ್ನ ಸಹಚರರೊಂದಿಗೆ ವಂಚಿಸಿದ ರಘ ಮೇಲೆ ಹಲ್ಲೆ ನಡೆಸಿ ಅವರಿಂದ ಕಾರು , ಹಣ, ಲ್ಯಾಪ್ ಟ್ಯಾಪ್ ದೋಚಿದ್ದಾರೆ ಎಂದು ಹೇಳಲಾಗಿದೆ.
ತನ್ನ ಆರು ಜನ ಸಹಚರರೊಂದಿಗೆ ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ನಟಿ ಸುಶ್ಮಿತಾ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.