ಬೆಂಗಳೂರು : ಇಂದಿನಿಂದ ಸೀಜ್ ಆದ ವಾಹನಗಳನ್ನು ರಿಲೀಸ್ ಮಾಡುವಂತೆ ಕೋರ್ಟ್ ಆದೇಶಿಸಿದೆ.
ಕೊರೊನಾ ಹಿನ್ನಲೆಯಲ್ಲಿ ಇಡೀ ದೇಶ ಲಾಕ್ ಡೌನ್ ಮಾಡಿದ್ದರೂ ಕೆಲವು ವಾಹನ ಸವಾರರು ಲಾಕ್ ಡೌನ್ ಉಲ್ಲಂಘಿಸಿ ರೋಡಿಗಳಿದಿದ್ದ ಕಾರಣ ಅವರ ವಾಹನಗಳನ್ನು ಸೀಜ್ ಮಾಡಲಾಗಿತ್ತು.
ಇದೀಗ ಈ ಬಗ್ಗೆ ಕೋರ್ಟ್ ಆದೇಶ ಹೊಡಿಸಿದ್ದು, ಇಂದಿನಿಂದ ಸೀಜ್ ಆದ ವಾಹನಗಳನ್ನು ರಿಲೀಸ್ ಮಾಡಲಾಗುವುದು. ವಾಹನಗಳ ಮಾಲೀಕರು ಕಾರು , ಜೀಪ್ ಗಳಿಗೆ 1000ರೂ. ಹಾಗೂ ಆಟೋ, ಬೈಕ್ ಗಳಿಗೆ 500ರೂ.ದಂಡ ಕಟ್ಟಿ ಡಿಎಲ್, ಇನ್ಸೂರೆನ್ಸ್ ತೋರಿಸಿ ವಾಹನಗಳನ್ನುಬಿಡಿಸಿಕೊಂಡು ಮುಚ್ಚಳಿಕೆ ಬರೆದುಕೊಡುವಂತೆ ಸೂಚಿಸಿದೆ.