Publish Date: Fri, 01 May 2020 (09:54 IST)
Updated Date: Fri, 01 May 2020 (09:58 IST)
ಬೆಂಗಳೂರು: ಇಂದು ಮೇ ಡೇ ಅಂದರೆ ಕಾರ್ಮಿಕರ ದಿನ. ವಿಪರ್ಯಾಸವೆಂದರೆ ಕೊರೋನಾವೈರಸ್ ನಿಂದಾಗಿ ಕಾರ್ಮಿಕರು ಇಂದು ನಿತ್ಯದ ಬದುಕಿಗೆ ಬವಣೆ ಪಡುವ ಸ್ಥಿತಿಯಲ್ಲಿದ್ದಾರೆ.
ಇದು ಕೇವಲ ಭಾರತ ಮಾತ್ರವಲ್ಲ, ವಿಶ್ವದೆಲ್ಲೆಡೆ ಇದೇ ಸ್ಥಿತಿಯಿದೆ. ಕೊರೋನಾದಿಂದಾಗಿ ಎಲ್ಲೆಡೆ ಲಾಕ್ ಡೌನ್ ಜಾರಿಯಲ್ಲಿದ್ದು, ಉದ್ಯಮಗಳು, ಕೈಗಾರಿಕೆಗಳು ಬಾಗಿಲು ಬಂದ್ ಮಾಡಿ ಕುಳಿತಿವೆ.
ಮತ್ತೆ ಕೈಗಾರಿಕೆಗಳು ಆರಂಭವಾಗಿ ಕಾರ್ಮಿಕರ ಬದುಕು ಸಹಜ ಸ್ಥಿತಿಗೆ ತರಲು ನಾವೆಲ್ಲರೂ ಜತೆಯಾಗಿ ಹೋರಾಡಬೇಕಿದೆ. ಇನ್ನಾದರೂ ಕೊರೋನಾ ದೂರವಾಗಿ ಲಾಕ್ ಡೌನ್ ಮುಕ್ತವಾಗಿ ಕಾರ್ಮಿಕರ ಅನ್ನದ ದಾರಿ ಸುಗಮವಾಗಲಿ ಎಂದು ಹಾರೈಸೋಣ.