Publish Date: Sun, 28 Oct 2018 (11:39 IST)
Updated Date: Sun, 28 Oct 2018 (11:40 IST)
ಜಮಖಂಡಿ: ವಾಲ್ಮೀಕಿ ಸಮುದಾಯಕ್ಕೆ ಸೇರಿದ ಶ್ರೀರಾಮುಲು ಅವರಿಗೆ 420 ಎನ್ನುವ ಮೂಲಕ ಆ ಸಮುದಾರಕ್ಕೇ ಅಪಮಾನ ಮಾಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ
ನಾನು ಶ್ರೀರಾಮುಲುಗೆ ಸೆಕ್ಷನ್ 371 ಜೆ ಗೊತ್ತಿಲ್ಲ, 420 ಮಾತ್ರ ಗೊತ್ತು ಎಂದಿದ್ದೆ. ವಾಲ್ಮೀಕಿ ಸಮುದಾಯಕ್ಕೂ ಸೆಕ್ಷನ್ 420 ಗೂ ಏನು ಸಂಬಂಧ? 420 ಎನ್ನುವ ಸೆಕ್ಷನ್ ಜಾರಿಯಲ್ಲಿ ಇಲ್ವಾ? ಇಷ್ಟಕ್ಕೇ ನಾನು ವಾಲ್ಮೀಕಿ ಸಮುದಾಯಕ್ಕೆ ಅಪಮಾನ ಮಾಡಿದೆ ಎಂದು ಪುಕಾರು ಎಬ್ಬಿಸುತ್ತಿದ್ದಾರೆ. ನನಗೆ ಮಹರ್ಷಿ ವಾಲ್ಮೀಕಿ ಬಗೆಗೆ ಇರುವಷ್ಟು ಗೌರವ ಇವರಿಗಿಲ್ಲ’ ಎಂದು ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಜನರ ವಿರುದ್ಧ ಸೆಕ್ಷನ್ 420 ಕೇಸ್ ಹಾಕಿಸುತ್ತಿದ್ದವರು ಇವರೇ. ಇವರ ಪಕ್ಷದ ಜನಾರ್ಧನ ರೆಡ್ಡಿ ಮೇಲೆಯೇ ಈ ಸೆಕ್ಷನ್ ನಲ್ಲಿ ಕೇಸು ಆಗಲಿಲ್ವಾ? ಮತಗಳನ್ನು ಕೊಳ್ಳುವ ಕೆಲಸಗಳನ್ನು ಶುರು ಮಾಡಿದವರೇ ಬಿಎಸ್ ವೈ, ಬಿಜೆಪಿಯವರು’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.