Publish Date: Sat, 27 Oct 2018 (18:11 IST)
Updated Date: Sat, 27 Oct 2018 (18:12 IST)
ಕರುನಾಡಿನ ಜನರು ಲಕ್ಷ್ಮೀಯನ್ನು ಸರಕಾರದ ಖಜಾನೆಯಲ್ಲಿ ಸಮೃದ್ಧಿಯಾಗಿ ಕೂಡಿಟ್ಟಿದ್ದಾರೆ. ಹೀಗಂತ ಸಿಎಂ ಹೇಳಿದ್ದಾರೆ.
ರಾಜ್ಯದ ಬೊಕ್ಕಸಕ್ಕೆ ಬಡತನ ಬಂದಿಲ್ಲ. ಜನರು ಲಕ್ಷ್ಮೀಯನ್ನು ಸಮೃದ್ಧವಾಗಿ ಖಜಾನೆಯಲ್ಲಿ ಇಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಖಜಾನೆ ಬಗ್ಗೆ ವಿಶ್ವಾಸದಿಂದ ಮೈಸೂರಿನಲ್ಲಿ ಮಾತನಾಡಿರುವ ಸಿಎಂ ಕುಮಾರಸ್ವಾಮಿ, ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಉಪಚುನಾವಣೆ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಬೀಗ ಹಾಕಿ ಸರಕಾರ ಚುನಾವಣೆಯಲ್ಲಿ ಮುಳುಗಿಲ್ಲ ಎಂದು ಬಿಎಸ್ ವೈ ಹೇಳಿಕೆ ವಿರುದ್ಧ ಹರಿಹಾಯ್ದರು.
ಜನರ ಕೆಲಸದತ್ತ ಸರಕಾರ ಗಮನ ಹರಿಸಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 20 ಉಪಚುನಾವಣೆಗಳನ್ನು ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.