Publish Date: Sat, 27 Oct 2018 (09:13 IST)
Updated Date: Sat, 27 Oct 2018 (09:14 IST)
ಚೆನ್ನೈ: ರಾಜಕೀಯ ಪಕ್ಷ ಸ್ಥಾಪಿಸಲು ಹೊರಟಿರುವ ಸೂಪರ್ ಸ್ಟಾರ್ ರಜನೀಕಾಂತ್ ಮೇಲೆ ವಿಪಕ್ಷ ಡಿಎಂಕೆ ವಾಗ್ದಾಳಿ ನಡೆಸಿದ್ದು, ಬಿಜೆಪಿಯ ಕೈಗೊಂಬೆ ಎಂದು ಜರೆದಿದೆ.
ಇದೇ ಮೊದಲ ಬಾರಿಗೆ ಸೂಪರ್ ಸ್ಟಾರ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿರುವ ಡಿಎಂಕೆ ಮುಖವಾಣಿ ಮುರಸೋಳಿ ಪತ್ರಿಕೆ ರಜನಿ ಬಿಜೆಪಿ ಕೈಗೊಂಬೆಯಂತೆ ಕೆಲಸ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೂ ನಿರಾಸೆ ಮೂಡಿಸಿದ್ದಾರೆ ಎಂದಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ರಜನಿ ತಮ್ಮ ಹಾಗೂ ಅಭಿಮಾನಿಗಳ ನಡುವೆ ಯಾರೂ ಕಂದಕ ಸೃಷ್ಟಿಸಲು ಆಗದು ಎಂದಿದ್ದಾರೆ. ತನಗೆ ತನ್ನ ಅಭಿಮಾನಿಗಳ ಮೇಲೆ ವಿಶ್ವಾಸವಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.