Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಾಜ್ಯದಲ್ಲಿ ಉಪ ಚುನಾವಣೆ ಕಾವು ಜೋರಾಗಿದೆ. ಈ ನಡುವೆ ರಾಜಕೀಯ ಪಕ್ಷಗಳ ಮುಖಂಡರ ನಡುವಿನ ವಾಕ್ಸಮರ ತಾರಕಕ್ಕೇರಿದೆ.
ತಿಪ್ಪರಲಾಗ ಹಾಕಿದ್ರೂ ಬೈ ಎಲೆಕ್ಷನ್ ನಲ್ಲಿ ಜೆಡಿಎಸ್ ಗೆಲ್ಲೋದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಕ್ಕೆ ಜೆಡಿಎಸ್ ಫುಲ್ ಗರಂ ಆಗಿದೆ.
ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಹಳೇಯ ಪಕ್ಷ ಕಾಂಗ್ರೆಸ್ ಇವತ್ತು ಯಾವ ಸ್ಥಿತಿಯಲ್ಲಿದೆ? ಸ್ವಂತ ಬಲದಿಂದ ಯಾವ ರಾಜ್ಯದಲ್ಲಿ ಅಧಿಕಾರದಲ್ಲಿದೆ? ಯಾರ ಯಾರ ಹೆಗಲ ಮೇಲೆ ಕುಳಿತಿದೆ? ರಾಜಕೀಯವಾಗಿ ಉಳಿದಿದೆಯಾ? ಎಂದೆಲ್ಲ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.
ಜೆಡಿಎಸ್ ನಲ್ಲಿದ್ದು ಡಿಸಿಎಂ ಆಗಿದ್ದವರು ಜೆಡಿಎಸ್ ನ ಉಪ್ಪು ತಿಂದಿದ್ದಕ್ಕೆ ಉತ್ತರ ಕೊಡಲಿ ಎಂದು ಸವಾಲು ಹಾಕಿದ್ದಾರೆ.