Publish Date: Fri, 02 Oct 2020 (10:25 IST)
Updated Date: Fri, 02 Oct 2020 (10:27 IST)
ಬೆಳಗಾವಿ: ಸಿದ್ದರಾಮಯ್ಯ ಬ್ರಿಟಿಷರಿಗಿಂತ ಕೆಟ್ಟ ಆಡಳಿತ ನಡೆಸಿದ್ದಾರೆ ಎಂದ ನಳಿನ್ ಕುಮಾರ್ ಕಟೀಲು ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲು ಯಕಶ್ಚಿತ್ ರಾಜಕಾರಣಿ. ನನ್ನ ಕಾಲದಲ್ಲಿ ಒಂದೇ ಒಂದು ಚೆಕ್ ಬೌನ್ಸ್ ಆಗಿಲ್ಲ.ಇವರ ಕಾಲದಲ್ಲಿ ಸಂಬಳ ಕೊಡಲು ದುಡ್ಡಿಲ್ಲ ಎಂದು ಹೀಯಾಳಿಸಿದ್ದಾರೆ.
ಹಾಗೇ ನೆರೆ ಸಂತ್ರಸ್ತರಿಗೆ ಈವರೆಗೆ ಮನೆಕಟ್ಟಿ ಕೊಟ್ಟಿಲ್ಲ, ದುಡ್ಡು ಕೊಟ್ಟಿಲ್ಲ. ಈ ಸಲ ನೆರೆ ಬಂದಾಗ ಒಂದೆ ಒಂದು ಪೈಸೆ ಖರ್ಚು ಮಾಡಿಲ್ಲ. ಮೆಡಿಕಲ್ ಸಾಮಾಗ್ರಿಗಳ ಹಗರಣ ಆಗಿದೆ ಅಂದಾಗ ಒಪ್ಪಲಿಲ್ಲ. 4000 ಕೋಟಿಯಲ್ಲಿ 2000 ಕೋಟಿ ಲಂಚ ಹೊಡೆದಿದ್ದಾರೆ. ಯಡಿಯೂರಪ್ಪ ಚೆಕ್ ಮೂಲಕ ತೆಗೆದುಕೊಂಡರೆ. ಅವರ ಮೊಮ್ಮಗ ಆರ್ ಟಿಜಿಎಸ್ ಮೂಲಕ ಪಡೆಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.