Publish Date: Sun, 06 Oct 2019 (18:55 IST)
Updated Date: Sun, 06 Oct 2019 (18:58 IST)
ನೆರೆ ಪರಿಹಾರ ವಿಷಯದಲ್ಲಿ ಹಾಲಿ, ಮಾಜಿ ಸಿಎಂಗಳ ನಡುವಿನ ವಾಗ್ಯುದ್ಧ ಜೋರಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ನೆರೆ ವಿಚಾರದಲ್ಲಿ ರಾಜಕೀಯ ಮಾಡೋದು ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿಯಾಗಿ ಕಾಮೆಂಟ್ ಮಾಡೋದು ತಪ್ಪು. ಹೀಗಂತ ಸಚಿವ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ.
ಈ ಹಿಂದೆ ನೆರೆ ಇದ್ದಾಗ ಕಣ್ಣು ನೋವು ಅಂತಾ ಬೆಂಗಳೂರಿನಲ್ಲಿ ಕುಳಿತುಕೊಂಡವರು ನೀವು. ಮೊದಲು ಆ ಬಗ್ಗೆ ವಿಚಾರ ಮಾಡಿ, ಸುಮ್ಮ ಸುಮ್ಮನೆ ಮಾತನಾಡೋದ ಅಲ್ಲ. ಎನ್ ಡಿ ಎ ಹಾಗೂ ಯುಪಿಎ ಸರ್ಕಾರ ನೆರೆ ಪರಿಹಾರ ನೀಡಿದ ಹತ್ತು ಹದಿನೈದು ವರ್ಷಗಳ ಅಂಕಿ ಸಂಖ್ಯೆಗಳನ್ನು ನೋಡಿ. ನರೆ ಬಂದಾಗ ಯಾವ ಸರ್ಕಾರ ಸ್ಪಂದಿಸಿ ಎಷ್ಟು ಹಣ ನೀಡಿದೆ ಅನ್ನೋದನ್ನು ಲೆಕ್ಕಹಾಕಿ ನೋಡಿ ಅಂತೆಲ್ಲಾ ವಾಗ್ದಾಳಿ ಮಾಡಿದ್ದಾರೆ.
ಇನ್ನೂ ಕೇಂದ್ರದಿಂದ ಬಂದಿರುವ 1200 ಕೋಟಿ ಮಧ್ಯಂತರ ನೆರೆ ಪರಿಹಾರವನ್ನು ಸ್ವಾಗತಿಸುತ್ತೇನೆ. ಅಲ್ಲದೇ ನೆರೆ ಬಗ್ಗೆ ಮುಂಬರುವ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು ಅಂತ ಶೆಟ್ಟರ್ ಹೇಳಿದ್ರು.