Publish Date: Sun, 06 Oct 2019 (18:51 IST)
Updated Date: Sun, 06 Oct 2019 (18:52 IST)
ಕಲ್ಲು ಗಣಿಯಲ್ಲಿ ನಡೆಯಬಾರದ ಘಟನೆ ನಡೆದುಹೋಗಿದೆ.
ಈಜಲು ಹೋದ ಸಹೋದರಿಬ್ಬರು ನೀರು ಪಾಲಾಗಿದ್ದಾರೆ. ಪವನ ಸಂಜಯ ದೊಡಮನಿ (13) ಮತ್ತು ಪೃಥ್ವಿರಾಜ ಸಂಜಯ ದೊಡಮನಿ (9) ಮೃತ ದುದೈರ್ವಿಗಳಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ದೊಡಮನಿ ತೋಟದ ದಾನೇಶ್ವರಿ ಗುಡಿ ಹತ್ತಿರ ನಡೆದ ಘಟನೆ ಇದಾಗಿದೆ.
ಅಥಣಿ ಪಟ್ಟಣದ ತೋಟದ ಮನೆಯಲ್ಲಿ ನಡೆದ ದುರ್ಘಟನೆಯಲ್ಲಿ ಕಲ್ಲು ಗಣಿಯಲ್ಲಿ ಈಜಲು ಹೋಗಿದ್ದ ಸಹೋದರರು ಸಾವನ್ನಪ್ಪಿದ್ದಾರೆ.
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.