Publish Date: Sun, 06 Oct 2019 (12:31 IST)
Updated Date: Sun, 06 Oct 2019 (12:33 IST)
ಕೇಂದ್ರ ಸರಕಾರವು ರಾಜ್ಯ ಸರಕಾರದ ವರದಿ ತಿರಸ್ಕಾರ ಮಾಡಿಲ್ಲ. 1200 ಕೋಟಿ ಬಿಡುಗಡೆ ಮಾಡಿದ್ದಾರೆ.
ಮತ್ತೆ ಹೆಚ್ಚಿನ ನೆರೆ ಪರಿಹಾರ ಬಿಡುಗಡೆ ಮಾಡಲು ಪ್ರಧಾನಿ ಮೋದಿ ಹತ್ತಿರ ಹೋಗ್ತೇನೆ. ಹೀಗಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಯಾದಗಿರಿ ಜಿಲ್ಲೆಗೆ ಮೆಡಿಕಲ್ ಕಾಲೇಜ್ ಮುಂದಿನ ಬಜೆಟ್ ನಲ್ಲಿ ಘೋಷಣೆ ಮಾಡಲಾಗುತ್ತದೆ. ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಹೆಜ್ಜೆ ಇಡಲಾಗುತ್ತದೆ. ಔರಾದ್ಕರ ವರದಿ ಪೂರ್ಣ ಜಾರಿಗೆ ತರಲು ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಹಣಕಾಸಿನ ಪರಿಸ್ಥಿತಿ ಸರಿ ಇರುವುದರಿಂದ ಉತ್ತಮ ಕೆಲಸ ಮಾಡುತ್ತಿದ್ದು, ಒಟ್ಟಾರೆ 3800 ಕೋಟಿ ನೆರೆಯಿಂದ ಹಾನಿಯಾಗಿದೆ ಅಂತ ತಿಳಿಸಿದ್ದಾರೆ.