ಬೆಂಗಳೂರು : ಇಂದಿನಿಂದ ಮದ್ಯದಂಗಡಿ ಓಪನ್ ಮಾಡಿಸಿ ಮದ್ಯ ಪ್ರಿಯರಿಗೆ ಸಿಹಿಸುದ್ದಿ ನೀಡಿದ ಸರ್ಕಾರ ಇದೀಗ ಶಾಕಿಂಗ್ ನ್ಯೂಸ್ ವೊಂದನ್ನು ನೀಡಿದೆ.
ಹೌದು. ಇಂದಿನಿಂದ ಸರ್ಕಾರದ ಅನುಮತಿ ಮೇರೆಗೆ ಮದ್ಯದಂಗಡಿ ಓಪನ್ ಮಾಡಿದ್ದು, ಮದ್ಯಪ್ರಿಯರ ಸಂಭ್ರಮ ಮುಗಿಲು ಮುಟ್ಟಿದೆ. ಆದರೆ ಈ ನಡುವೆ ನಾಳೆಯಿಂದ ಮದ್ಯದ ರೇಟು ಹೆಚ್ಚಾಗಲಿದೆ ಎಂಬ ಶಾಕಿಂಗ್ ವಿಚಾರ ಹೊರಬಿದ್ದಿದೆ.
ಬಜೆಟ್ ನಲ್ಲಿ ಘೋಷಿಸಿದಂತೆ ಸೆಸ್ ಅನ್ವಯ ಮದ್ಯದ ರೇಟು ಹೆಚ್ಚಿಸಲು ಸರ್ಕಾರ ಮುಂದಾಗಿದ್ದು, ಮದ್ಯದ ಮೇಲಿನ ಸೆಸ್ ಶೇ.6ರಷ್ಟು ಏರಿಕೆ ಮಾಡಲಿದೆ ಎನ್ನಲಾಗಿದೆ.