ಗದಗ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಎಲ್ಲೆಂದರಲ್ಲಿ ಪೈಪ್ಲೈನ್ ಒಡೆದು ಹೋಗುತ್ತಿರುವ ಕಾರಣ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಕುಡಿಯುವ ನೀರೆಲ್ಲವೂ ಚರಂಡಿ ಪಾಲಾಗಿದ್ದು, 15-20 ದಿನಕೊಮ್ಮೆ ಜನರಿಗೆ ನೀರು ಸಿಗುತ್ತಿದೆ. ಎಲ್ಲೆಂದರಲ್ಲಿ ಪೈಪ್ಲೈನ್ ಒಡೆದು ನೀರುಪೋಲಾದರೂ ಸಹ ಪೈಪ್ಲೈನ್ ದುರಸ್ತಿ ಮಾಡದೇ ನಗರಸಭೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.