Publish Date: Tue, 13 Jun 2023 (14:53 IST)
Updated Date: Tue, 13 Jun 2023 (08:58 IST)
ಶಾಟ್೯ ಸಕ್ಯೂ೯ಟ್ನಿಂದ ಐಸ್ ಕ್ರೀಮ್ ಅಂಗಡಿ ಬೆಂಕಿಗಾಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿ ಗ್ರಾಮದಲ್ಲಿ ನಡೆದಿದೆ.. S.V. ಬಂಡಾರಿ ಎಂಬುವವರಿಗೆ ಸೇರಿದ ಐಸ್‌ಕ್ರೀಮ್ ಅಂಗಡಿಯಲ್ಲಿ ತಡರಾತ್ರಿ ಶಾರ್ಟ್ಸಕ್ಯೂ೯ಟ್ ಸಂಭವಿಸಿ ಲಕ್ಷಾಂತರ ಬೆಲೆ ಬಾಳುವ ಫ್ರಿಡ್ಜ್ ಸೇರಿದಂತೆ ಅನೇಕ ಸಾಮಾಗ್ರಿಗಳು ಸುಟ್ಟು ಕರಕಲಾಗಿದೆ.. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅಂದಾಜು 40 ಲಕ್ಷಕ್ಕೂ ಅಧಿಕ ಪ್ರಮಾಣದಲ್ಲಿ ನಷ್ಟವಾಗಿದೆ ಇದಕ್ಕೆ ಸೂಕ್ತ ಪರಿಹಾರ ನೀಡುವಂತೆ ಅಂಗಡಿ ಮಾಲೀಕರು ಒತ್ತಾಯ ಮಾಡಿದ್ದಾರೆ.. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ