Publish Date: Tue, 13 Jun 2023 (13:45 IST)
Updated Date: Tue, 13 Jun 2023 (08:49 IST)
ಶಕ್ತಿ ಯೋಜನೆಯಿಂದ ಮಹಿಳೆಯರು ಫುಲ್ ಖುಷಿಯಾಗಿದ್ದಾರೆ, ಆದರೆ ಇತ್ತ ಖಾಸಗಿ ಬಸ್ ಮಾಲೀಕರು ಸಂಕಷ್ಠದಲ್ಲಿ ಸಿಲುಕಿದ್ದಾರೆ. ನಿತ್ಯ ತುಂಬುತ್ತಿದ್ದ ಬಸ್ ಇಂದು ಖಾಲಿ ಖಾಲಿಯಾಗಿದೆ, ದಾವಣಗೆರೆ ಖಾಸಗಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳಲ್ಲಿ ಜನ ಹತ್ತದೇ ಇರುವುದರಿಂದ ಬಸ್ಗಳು ಸಂಚರಿಸದೇ ನಿಂತಲ್ಲೇ ನಿಂತಿದ್ವು. ಶಕ್ತಿ ಯೋಜನೆಯಿಂದ ನಮ್ಮ ಬದುಕು ಬೀದಿಗೆ ಬರುವಂತಾಗಿದೆ ಎಂದು ಖಾಸಗಿ ಬಸ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.