ಬೆಂಗಳೂರು : ಬೆಂಗಳೂರಿನಲ್ಲಿ ಓಲಾ, ಉಬರ್ ನಲ್ಲಿ ಸೀಟ್ ಶೇರಿಂಗ್ ಸೌಲಭ್ಯವನ್ನು ರಾಜ್ಯ ಸರ್ಕಾರ ಬ್ಯಾನ್ ಮಾಡಿದೆ.
ಶೇರಿಂಗ್ ನಿಂದಾಗಿ ಮಹಿಳೆಯರ ಸುರಕ್ಷತೆಗೆ ತೊಂದರೆ ಯಾಗುವುದಲ್ಲದೇ ಇನ್ನೂ ಅನೇಕ ಅನಾನುಕೂಲತೆ ಆಗಿದ್ದರಿಂದ ಶೇರಿಂಗ್ ಸೌಲಭ್ಯವನ್ನು ಬ್ಯಾನ್ ಮಾಡಬೇಕೆಂದು ಕಾರು ಚಾಲಕರು ದೂರು ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಸೌಲಭ್ಯವನ್ನು ಬ್ಯಾನ್ ಮಾಡಿದೆ.
ಓಲಾ ಮತ್ತು ಉಬರ್ ನಲ್ಲಿ ಶೇರಿಂಗ್ ಮಾಡಿಕೊಂಡು ಓಡಾಡುವುದು ನಿಯಮಬಾಹಿರವಾಗಿದೆ. ಏನೇ ಹೊಸ ಸೌಲಭ್ಯ ನೀಡುವುದಾದರೂ ಕಾನೂನು ವ್ಯಾಪ್ತಿಯಲ್ಲೇ ನೀಡಬೇಕೆಂದು ಸಾರಿಗೆ ಇಲಾಖೆ ತಿಳಿಸಿದೆ.
ಹಾಗೇ ಒಂದು ವೇಳೆ ಬ್ಯಾನ್ ಬಳಿಕವೂ ಕಂಪನಿಗಳು ಈ ಸೌಲಭ್ಯವನ್ನು ಮುಂದುವರಿಸಿದರೆ ಅವುಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅರ್ಜಿ ಸಲ್ಲಿಸುತ್ತೇವೆ ಎಂದು ಕಾರು ಚಾಲಕರ ಸಂಘದ ಮುಖಂಡರು ತಿಳಿಸಿದ್ದಾರೆ.