ಬೆಂಗಳೂರು : ಮಾವಿನ ಹಣ್ಣು ಎಲ್ಲರೂ ಇಷ್ಟಪಡುವಂತಹ ಸಿಹಿಯಾದ, ರುಚಿಯಾದ ಹಣ್ಣು. ಇದು ಆರೋಗ್ಯಕ್ಕೆ ಮಾತ್ರವಲ್ಲ ಕೂದಲ ಸೌಂದರ್ಯ ವೃದ್ಧಿಸಲು ಕೂಡ ತುಂಬಾ ಉಪಯೋಗಕಾರಿ.
*ಮಾವಿನ ಹಣ್ಣಿನ ತಿರುಳು ಹಾಗೂ 2 ಟೀ ಚಮಚ ಆಲಿವ್ ಎಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. ½ ಗಂಟೆ ಬಿಟ್ಟು ತೊಳೆದರೆ ಕೂದಲು ರೇಷ್ಮೆಯಂತೆ ನಯವಾಗುತ್ತದೆ.
*1 ಹಣ್ಣಾದ ಮಾವಿನ ಹಣ್ಣಿನ ತಿರುಳಿಗೆ 2 ಮೊಟ್ಟೆಯ ಹಳದಿ ಭಾಗ ಹಾಗೂ 2 ಚಮಚ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 45 ನಿಮಿಷಗಳ ನಂತರ ಶಾಂಪೂವಿನಿಂದ ತೊಳೆಯಿರಿ. ಇದರಿಂದ ಕೂದಲು ನಯವಾಗಿ ಬಲವಾಗಿಸುತ್ತದೆ. ಅಲ್ಲದೇ ಇದು ಕೂದಲ ಬೆಳವಣೆಗೆಗೂ ಸಹಕಾರಿ.
* ಮಾವಿನ ಹಣ್ಣಿನ ತಿರುಳಿಗೆ 1ಚಮಚ ಅಲೊವೆರಾ ಜೆಲ್ ಹಾಗೂ 1 ಚಮಚ ಹರಳೆಣ್ಣೆ ಮಿಕ್ಸ್ ಮಾಡಿ. ಇದು ಕೂದಲು ಹಾನಿಗೊಳಗಾಗುವುದನ್ನು ತಡೆಯುತ್ತದೆ. ಮತ್ತು ಕೂದಲು ಕವಲೊಡೆಯುವುದನ್ನು ತಡೆಗಟ್ಟುತ್ತದೆ.