ಬೆಂಗಳೂರು : ಅತಿಯಾದರೆ ಅಮೃತವು ವಿಷ ಎಂಬಂತೆ ಅತಿಯಾದ ಶೃಂಗಾರ ದೇಹಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ಇದು ನಿಜನಾ? ಸುಳ್ಳೋ? ಎಂಬ ಮಾಹಿತಿ ಇಲ್ಲಿದೆ ನೋಡಿ.
ನಿಯಮಿತವಾಗಿ ಲೈಂಗಿಕ ಕ್ರಿಯೆ ಮಾಡುವುದರಿಂದ ಪುರುಷರಲ್ಲಿ ವೀರ್ಯಾಣು ನಷ್ಟವಾಗಿ ಪುರುಷತ್ವ ಕಳೆದುಕೊಳ್ಳುತ್ತಾರೆ ಎಂಬ ಕಲ್ಪನೆ ನಮ್ಮಲ್ಲಿದೆ. ಆದರೆ ಇದು ತಪ್ಪು. ಯಾಕೆಂದರೆ ಅಪರೂಪಕ್ಕೊಮ್ಮೆ ಲೈಂಗಿಕ ಕ್ರಿಯೆ ಮಾಡುವುದರಿಂದ ಪುರುಷರಲ್ಲಿ ಫಲವಂತಿಕೆ ಕಳೆದುಕೊಳ್ಳುವ ಅಪಾಯ ಹೆಚ್ಚು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ದೇಹದೊಳಗೆ ತುಂಬಾ ಸಮಯದವರೆಗೆ ವೀರ್ಯಾಣು ಸಂಗ್ರಹವಿರುವುದರಿಂದ ಡಿಎನ್ ಎ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ದೇಹದಲ್ಲಿ ವೀರ್ಯಾಣು ಉತ್ಪತ್ತಿಯಾಗಲು ಬೇಕಿರುವುದು 24-36 ಗಂಟೆಗಳು.
ನಿಯಮಿತವಾಗಿ ಲೈಂಗಿಕ ಕ್ರಿಯೆ ಮಾಡುವುದರಿಂದ ಹೊಸ ವೀರ್ಯಾಣುಗಳು ಉತ್ಪತ್ತಿಯಾಗಿ ಫಲವಂತಿಕೆಯ ವೀರ್ಯಾಣು ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.