Publish Date: Wed, 23 Dec 2020 (12:11 IST)
Updated Date: Wed, 23 Dec 2020 (12:13 IST)
ಬೆಂಗಳೂರು : ದೇಶದಲ್ಲಿ ಮತ್ತೆ ಕೊರೊನಾ ಆರ್ಭಟ ಹೆಚ್ಚಾಗಿದ್ದು, ಜನರು ಆತಂಕದಲ್ಲಿದ್ದಾರೆ. ಈ ನಡುವೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಜ.1ರಿಂದ ಶಾಲೆ ಆರಂಭಿಸುವುದು ಖಚಿತವೆಂದು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಿರ್ಧಾರವಾದಂತೆ ಜ.1ರಿಂದ ಶಾಲೆ ಆರಂಭವಾಗಿದೆ. ರೂಪಾಂತರ ವೈರಸ್ ಬಗ್ಗೆ ತಜ್ಞರ ಜೊತೆಗೆ ಮಾತಾಡಿದ್ದೀನಿ. ಹೊಸ ವೈರಸ್ ಬಗ್ಗೆ ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ. ಹಾಗಾಗಿ ಜ.1ರಿಂದ ಶಾಲೆ ಪ್ರಾರಂಭವಾಗುವುದು ಎಂದು ತಿಳಿಸಿದ್ದಾರೆ.