Publish Date: Wed, 23 Dec 2020 (05:44 IST)
Updated Date: Wed, 23 Dec 2020 (05:46 IST)
ಬೆಂಗಳೂರು : ಮನೆಯನ್ನು ನಿರ್ಮಿಸಲು ವಾಸ್ತು ಎಷ್ಟು ಮುಖ್ಯನೋ ಅದೇರೀತಿ ನೀವು ವ್ಯವಹಾರ ಮಾಡುವ ಕಚೇರಿಯ ವಾಸ್ತು ಕೂಡ ಅಷ್ಟೇ ಮುಖ್ಯ. ವಾಸ್ತು ಪ್ರಕಾರ ವಾಸ್ತು ಕಚೇರಿ ನಿರ್ಮಿಸಿದರೆ ಅದರಿಂದ ಲಾಭವಾಗುತ್ತದೆ. ಹಾಗಾಗಿ ವ್ಯವಹಾರಕ್ಕೆ ಮುಖ್ಯವಾದ ಫೈಲ್ ಗಳನ್ನು ಇಡಲು ನಿರ್ಮಿಸುವ ಕೊಠಡಿಗಳನ್ನು ವಾಸ್ತು ಪ್ರಕಾರ ಈ ರೀತಿಯಾಗಿ ನಿರ್ಮಿಸಿ.
ವ್ಯವಹಾರದಲ್ಲಿ ಫೈಲ್ ಗಳು ತುಂಬಾ ಮುಖ್ಯ. ವ್ಯವಹಾರದ ಲಾಭ, ನಷ್ಟ, ಇನ್ನಿತರ ಮಾಹಿತಿಗಳನ್ನು ಫೈಲ್ ಗಳಲ್ಲಿ ಬರೆದಿಡುತ್ತೇವೆ. ಹಾಗಾಗಿ ಈ ಪೈಲ್ ಗಳನ್ನು ಕೊಠಡಿಯಲ್ಲಿ ಸ್ಟೋರ್ ಮಾಡಿ ಇಡುತ್ತಾರೆ.
ವಾಸ್ತು ಪ್ರಕಾರ ವ್ಯವಹಾರದ ಫೈಲ್ ಗಳನ್ನು ಇಡಲು ಕೊಠಡಿಯನ್ನು ನೈರುತ್ಯ, ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನಿರ್ಮಿಸಿ. ಇದರಿಂದ ನಿಮ್ಮ ವ್ಯವಹಾರದ ಪ್ರಗತಿಯತ್ತ ಸಾಗುತ್ತದೆ. ವ್ಯವಹಾರದಲ್ಲಿ ತುಂಬಾ ಲಾಭವಾಗುತ್ತದೆ.