Publish Date: Wed, 23 Dec 2020 (09:56 IST)
Updated Date: Wed, 23 Dec 2020 (09:58 IST)
ಬೆಂಗಳೂರು: ಇಡೀ ರಾಜ್ಯದಲ್ಲೇ ಸುದ್ದಿಯಾಗಿದ್ದ ಸಿಐಡಿ ಡಿವೈಎಸ್ ಪಿ ಲಕ್ಷ್ಮೀ ಅನುಮಾನಸ್ಪದ ಸಾವಿನ ತನಿಖೆ ಎಲ್ಲಿಯವರೆಗೆ ಬಂದಿದೆ? ಈ ಬಗ್ಗೆ ಲೇಟೆಸ್ಟ್ ಮಾಹಿತಿ ಇಲ್ಲಿದೆ ನೋಡಿ.
ಡಿವೈಎಸ್ ಪಿ ಲಕ್ಷ್ಮೀ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಆಕೆಯ ಸ್ನೇಹಿತ ಮನು, ರಾಹುಲ್, ಪ್ರಜ್ವಲ್, ರಂಜಿತ್ ಎಂಬವರನ್ನು ಬಂಧಿಸಿ ತನಿಖೆ ಮಾಡುತ್ತಿದ್ದಾರೆ. ಅಲ್ಲದೆ ಲಕ್ಷ್ಮೀ ಸಂಬಂಧಿಕರು, ಸ್ನೇಹಿತರನ್ನೆಲ್ಲಾ ವಿಚಾರಣೆ ನಡೆಸಲಾಗಿದೆ. ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಲಕ್ಷ್ಮೀ ಸಾವು ಆತ್ಮಹತ್ಯೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ವರದಿ ನೀಡಿಲ್ಲ. ಇದು ಸಿಕ್ಕ ಮೇಲಷ್ಟೇ ಪೊಲೀಸರಿಗೆ ಸ್ಪಷ್ಟ ಚಿತ್ರಣ ಸಿಗಲಿದೆ.