Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭದ್ರಕೋಟೆಗೆ ಇಂದು ಸಚಿವ ಆರ್. ಅಶೋಕ್ ಎಂಟ್ರಿ ಆಗ್ತಿದ್ದಾರೆ. ಇಂದು ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ನಾಮಪತ್ರ ಸಲ್ಲಿಸಿದ್ದಾರೆ. ಬೃಹತ್ ರೋಡ್ ಶೋ ನಡೆಸಿ ಬಳಿಕ ಕನಕಪುರದ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ರು. ಕನಕಪುರದ ಪ್ರಮುಖ ರಸ್ತೆಗಳಲ್ಲಿ ಆರ್. ಅಶೋಕ್ ಮೆರವಣಿಗೆ ನಡೆಸಿದ್ರು. ಹೈಕಮಾಂಡ್ ಟಾಸ್ಕ್ ಯಶಸ್ವಿ ಮಾಡಲು ಆರ್.ಅಶೋಕ್ ಸಕಲ ತಯಾರಿ ನಡೆಸಿದ್ದಾರೆ. ಇಂದಿನಿಂದ ಕ್ಷೇತ್ರದಲ್ಲಿ ಅಧಿಕೃತ ಪ್ರಚಾರಕ್ಕೆ ಚಾಲನೆ ದೊರೆತಿದ್ದು, ಒಕ್ಕಲಿಗ ಮತಗಳನ್ನು ಗುರಿಯಾಗಿಸಿಕೊಂಡು ಆರ್.ಅಶೋಕ್ ಪ್ರಚಾರ ನಡೆಸಲಿದ್ದಾರೆ. ಇನ್ನು ನಾಮಪತ್ರ ಸಲ್ಲಿಕೆ ವೇಳೆ ರಾಜ್ಯ ನಾಯಕರು ಸೇರಿ ಸ್ಥಳೀಯ ಮುಖಂಡರು ಭಾಗಿಯಾಗಿದ್ರು.