Publish Date: Tue, 18 Apr 2023 (15:35 IST)
Updated Date: Tue, 18 Apr 2023 (15:43 IST)
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಬಿ.ಎಲ್.ಸಂತೋಷ್ ಮೇಲೆ ಆರೋಪ ಮಾಡೋದು ಸರಿಯಲ್ಲಯಾರಿಗೆ ಯಾರೂ ಟಿಕೆಟ್ ತಪ್ಪಿಸಿಲ್ಲ.. ಎಲ್ಲ ನೋಡಿಕೊಂಡೇ ಹೈಕಮಾಂಡ್ ನಾಯಕರು ಟಿಕೆಟ್ ನೀಡಿದ್ದಾರೆ.ಬಿಜೆಪಿ ಪಕ್ಷ ಯಾರ ಕಪಿ ಮುಷ್ಠಿಯಲ್ಲೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.. ಇನ್ನು ಲಿಂಗಾಯತರಿಗೆ ಸಮರ್ಪಕವಾಗಿ ಮನ್ನಣೆ ನೀಡಿದ್ದೇ ಬಿಜೆಪಿ ಪಕ್ಷ.. ಕಾಂಗ್ರೆಸ್ ಪಕ್ಷ ಲಿಂಗಾಯತರನ್ನ ಕಡೆಗಣಿಸಿದೆ, ಉತ್ತರ ಕರ್ನಾಟಕದಲ್ಲಿ ಅತಿಹೆಚ್ಚು ಸೀಟ್ ಬಿಜೆಪಿ ಪಡೆಯಲಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಭರವಸೆ ವ್ಯಕ್ತಪಡಿಸಿದ್ರು.