Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧವೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಸಮಾಧಾನ ಹೊರಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಿಮ್ಮ ಸಲುವಾಗಿ ನಾವು ಹಗಲಿರುಳು ದುಡಿದಿದ್ದೇವೆ. ಜೋಶಿಯವರೇ, ನಿಮ್ಮನ್ನ ಎಂಪಿ ಮಾಡಲು ಎಷ್ಟು ಕಷ್ಟಪಟ್ಟಿದ್ದೇನೆ ನೆನಪಿಸಿಕೊಳ್ಳಿ. ಜೋಶಿ ನನ್ನ ಪರವಾಗಿ ಗಟ್ಟಿಯಾಗಿ ಮಾತನಾಡಬಹುದಿತ್ತು.. ಜೋಶಿಯವರೇ, ಸುಮ್ಮನೆ ನೀವು ಸಬೂಬು ಹೇಳಬೇಡಿ. ಜೋಶಿ ನನ್ನ ಪರವಾಗಿ ಹೈಕಮಾಂಡ್ ಬಳಿ ಮಾತನಾಡಿಲ್ಲ ಎಂದು ಪ್ರಲ್ಹಾದ್ ಜೋಶಿ ವಿರುದ್ಧ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.