Publish Date: Thu, 08 Jul 2021 (18:08 IST)
Updated Date: Thu, 08 Jul 2021 (18:11 IST)
ಸಲಿಂಗ ಕಾಮಕ್ಕಾಗಿ ಕರೆಸಿಕೊಂಡಿದ್ದ ಇಬ್ಬರು ಯುವಕರೇ ಶಿಕ್ಷಕನನ್ನು ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.
ಜೂನ್ 4ರಂದು ರಾತ್ರಿ ಸಲಿಂಗ ಕಾಮಕ್ಕಾಗಿ ಬಂದು ಶಿಕ್ಷಕ ವಿಶ್ವನಾಥ್ ಅವರನ್ನು ಕೊಲೆ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಶ್ರೀಕಾಂತ್, ಮನು ಹಾಗೂ ಮಂಜುನಾಥ ಬಂಧಿತ ಆರೋಪಿಗಳು.
ಸಲಿಂಗ ಕಾಮದಲ್ಲಿ ತೊಡಗಿದ್ದಾಗ ಶಿಕ್ಷಕನನ್ನು ಬೆತ್ತಲೆಗೊಳಿಸಿದ ಆರೋಪಿಗಳು ಕೊಲೆ ಮಾಡಿದ್ದರು. ಗೌರಿಬಿದನೂರು ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು