Publish Date: Thu, 08 Jul 2021 (14:48 IST)
Updated Date: Thu, 08 Jul 2021 (14:51 IST)
ಆದಿ ಚುಂಚನಗಿರಿ ಮಠಾಧೀಶರ ಫೋನ್ ಕದ್ದಾಲಿಸಿದ್ದಾರೆ ಅಂದ ಮೇಲೆ ನನ್ನ ದೂರವಾಣಿ ಕದ್ದಾಲಿಕೆ ಮಾಡುವುದಿಲ್ಲವೇ? ಎಂದು ಸಂಸದೆ ಸುಮಲತಾ ಅಂಬರೀಶ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮುದಾಯದ ಪೂಜ್ಯ ಗುರುಗಳೆಂದು ಆದಿ ಚುಂಚನಗಿರಿ ಸ್ವಾಮೀಜಿಯನ್ನು ಪೂಜಿಸುತ್ತೇವೆ. ಅಂಬರೀಶ್ ಮತ್ತು ನಾನು ದೇವರೇಂದು ಪೂಜಿಸುವ ಸ್ವಾಮೀಜಿ ಅವರದ್ದು ಕೂಡ ಟ್ಯಾಪ್ ಮಾಡಿದ್ದಾರೆ ಎಂದರು.
ಸ್ಯಾಂಡಲ್ ಫುಡ್ ಸ್ಲಗ್ಗರ್ ಎಂದು ಹೆಸರು ಕೊಟ್ಟು ನನ್ನ ಫೋನ್ ಟ್ಯಾಪ್ ಮಾಡಿದ್ದಾರೆ. ನಾನು ಇವರ ಯಾವ ಬೆದರಿಕೆಗೂ ಹೆದರಲ್ಲ. ನನ್ನ ಆಡಿಯೋ, ವೀಡಿಯೋ ಏನ್ ಕದ್ದು ರೆಕಾರ್ಡ್ ಮಾಡಿದ್ದಾರೋ ಅದನ್ನು ಬಿಡುಗಡೆ ಮಾಡಲಿ. ಪ್ರತಿಯೊಂದು ಫೋನ್ ಸಂಭಾಷಣೆಯನ್ನೂ ಬಹಿರಂಗಪಡಿಸಲಿ. ನಾನು ಅದನ್ನು ಎದುರಿಸಲು ಸಿದ್ಧಳಿದ್ದೇನೆ ಎಂದು ಅವರು ಹೇಳಿದರು.