ಅಂಬರೀಶ್ ಮುಂದೆ ನಾನು ಕೈ ಕಟ್ಟಿ ನಿಂತಿರುತ್ತಿದ್ದೆ. ಅಂದರೆ ನಾನು ಸಾರ್ವಜನಿಕರ ಮುಂದೆಯೂ ಕೈ ಕಟ್ಟಿ ನಿಲ್ಲುತ್ತಿದ್ದೆ. ಇವರು ಹೇಳೋ ಹಾಗೆ ನಾನಾನು ಅಂಬರೀಶ್ ಗೆ ಗುಲಾಮ ಆಗಿದ್ನಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಾಮನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಾರ್ವಜನಿಕರ ಮುಂದೆ ಕೂಡ ಕೈಕಟ್ಟಿ ಎಂಬ ಸುಮಲತಾ ಅವರ ಹೇಳಿಕೆಗೆ ಮಾಧ್ಯಮದವರು ಹೆಚ್ಚಿನ ಮನ್ನಣೆ ಕೊಡುವ ಅವಶ್ಯಕತೆ ಇಲ್ಲ. ನಾನು ಕಳೆದ ಎರಡು ದಿನದ ಹಿಂದೆ ಹೇಳಿದ್ದ ಹೇಳಿಕೆಗೆ ಸ್ಕೋಪ್ ಕೊಡುವ ಅವಶ್ಯಕತೆ ಇಲ್ಲ ಎಂದರು.
ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅನೇಕ ಸಮಸ್ಯೆಗಳಿಗೆ ಅದರ ಬಗ್ಗೆ ಮಾಧ್ಯಮದವರು ಗಮನಹರಿಸಬೇಕು. ಭ್ರಷ್ಟಾಚಾರದ ವಿಷಯದಲ್ಲಿ ಕುಮಾರಸ್ವಾಮಿ ಅಂಬಾಸಿಡರ್ ಎಂಬ ಹೇಳಿದ್ದಾರೆ. ಹೌದು, ನಾನು ಭ್ರಷ್ಟಾಚಾರ ಅಂಬಾಸಿಡರ್. ಅನೇಕ ವರ್ಷಗಳಿಂದ ನಾನು ನಮ್ಮ ಕುಟುಂಬ ಭ್ರಷ್ಟಾಚಾರದ ವಿಷಯದಲ್ಲಿ ಹೋರಾಟ ಮಾಡ್ತಿದ್ದೇವೆ. ಭ್ರಷ್ಟ ಅಧಿಕಾರಿಗಳು, ಭ್ರಷ್ಟಾಚಾರದ ವಿರುದ್ದ ದಾಖಲೆ ಸಮೇತ ಹೋರಾಟ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.
ಆ ಹೆಣ್ಣು ಮಗಳ ಬಗ್ಗೆ ಇದೀಗ ಚರ್ಚೆ ಬೇಡ. ಮುಂದಿನ ಚುನಾವಣೆ ಸಂದರ್ಭದಲ್ಲಿ ನಾನು ಮಾತಾಡುತ್ತೇನೆ ಎಂದು ಪರೋಕ್ಷವಾಗಿ ಸುಮಲತಾ ವಿರುದ್ಧ ಗೌರವಯುತವಾಗಿ ಮಾತನಾಡಿದರು.